ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ : ಠಾಣಾಧಿಕಾರಿ ಸುಧಾ ಪ್ರಭು

ಬೈಂದೂರು: ರಾಷ್ಟ್ರೀಯ ಹೆದ್ದಾರಿ 66 ಕುಂದಾಪುರ ಸಂಗಮ ಸರ್ಕಲ್ ನಲ್ಲಿ ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ 66 ರ ಮುಖ್ಯರಸ್ತೆಯ ಮಧ್ಯದಲ್ಲಿ ಸರ್ವಿಸ್ ಬಸ್ ಗಳನ್ನು ನಿಲ್ಲಿಸಲಾಗುತ್ತಿರುವುದರಿಂದ ಮುಖ್ಯ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿಗೆ ಸಂದರ್ಭದಲ್ಲಿ ಕುಂದಾಪುರ ಸಂಗಮನಲ್ಲಿ ಸರ್ವಿಸ್ ಬಸ್ ಗಳ ನಿಲ್ದಾಣಕ್ಕೆ ಸರ್ವಿಸ್ ರಸ್ತೆ ನಿರ್ಮಿಸಿದ್ದರು ಕೂಡ ಬಸ್ ಗಳು ಸರ್ವಿಸ್ ರಸ್ತೆಯಲ್ಲಿ ನಿಲ್ಲುತ್ತಿಲ್ಲ.

ಇದರಿಂದ ಸಾರ್ವಜನಿಕರಿಗೆ ಹಾಗೂ ಶಾಲೆ-ಕಾಲೇಜು ಮಕ್ಕಳು ರಸ್ತೆಯ ಮಧ್ಯದಲ್ಲಿ ಮಳೆಯಲ್ಲಿ ನಿಂತು ಪೇಚಾಡುವಂತ್ತಾಗಿದೆ.

ಸದ್ಯ ಈ ಸಮಸ್ಯೆಗಳನ್ನು ಮನಗಂಡ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು ಮುತುವರ್ಜಿ ವಹಿಸಿ ಕ್ರಮ ಕೈಗೊಂಡಿದ್ದರಿಂದ ಬಸ್ ಗಳು ಸರ್ವಿಸ್ ರಸ್ತೆಯಲ್ಲಿ ನಿಲ್ಲುತ್ತಿವೆ.

ಒಂದು ದಿನ ಪೂರ್ತಿ ಸಂಗಮ್ ಸರ್ಕಲ್ ಬಳಿ ನಿಂತು ಕುಂದಾಪುರ ಸಂಚಾರ ಠಾಣಾಧಿಕಾರಿ ಸುಧಾ ಪ್ರಭು ಹಾಗೂ ಮಹೇಶ್ ಕಂಬಿ, ಮತ್ತು ಸಿಬ್ಬಂದಿಗಳು ಬಸ್ ಚಾಲಕರಿಗೆ ಖಡಕ್ ವಾರ್ನಿಂಗ್ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಇಂತಹ ಕಾರ್ಯಕ್ಕೆ ಕುಂದಾಪುರ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಾರ್ವಜನಿಕ ವಲಯದಲ್ಲಿ ಬಾರಿ ಪ್ರಶಂಸೆ ವ್ಯಕ್ತವಾಗಿದೆ.

ಕುಂದಾಪುರ ಸಂಗಮ್ ಬಸ್ ನಿಲ್ದಾಣಕ್ಕೆ ರೋಟರಿ ಕ್ಲಬ್ ಸುಂದರ ಬಸ್ ತಂಗುದಾಣ ನಿರ್ಮಿಸಿಕೊಟ್ಟಿದೆ.

Edited By : Manjunath H D
Kshetra Samachara

Kshetra Samachara

16/06/2022 10:50 pm

Cinque Terre

9.57 K

Cinque Terre

1

ಸಂಬಂಧಿತ ಸುದ್ದಿ