ಬಜಪೆ:ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಾಜ್ಯ ಹೆದ್ದಾರಿಯ ಕಜೆಪದವು ಎಂಬಲ್ಲಿ ರಸ್ತೆಯ ಅಂಚಿನಲ್ಲಿ ರಾಶಿ ರಾಶಿ ತ್ಯಾಜ್ಯವು ಸಂಗ್ರಹವಾಗಿದ್ದು.ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರಿಗೆ ಕೊಳೆತ ತ್ಯಾಜದಿಂದ ಗಬ್ಬುನಾಥ ಬೀರುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಂಚಿನಲ್ಲಿ ತ್ಯಾಜ್ಯದ ರಾಶಿಯು ಹೆಚ್ಚಾಗುತ್ತಲೇ ಹೋಗುತ್ತಿದೆ.ರಸ್ತೆಯ ಅಂಚಿನ ಉದ್ದಕ್ಕೂ ತ್ಯಾಜ್ಯವು ತುಂಬಿ ಹೋಗಿದೆ. ಈ ರಸ್ತೆಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತದೆ.
ದಿನೇ ದಿನೇ ತ್ಯಾಜ್ಯದ ರಾಶಿಯು ಹೆಚ್ಚಾಗುತ್ತಿದೆ.ರಸ್ತೆಯಂಚಿನಲ್ಲಿ ತ್ಯಾಜ್ಯದ ರಾಶಿ ಹೆಚ್ಚಾಗುತ್ತಿರುದರ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಯಾವುದೇ ಕ್ರಮ ವನ್ನು ತೆಗೆದುಕೊಂಡಿಲ್ಲ ಅನ್ನುತ್ತಾರೆ ಸ್ಥಳೀಯರು.
Kshetra Samachara
06/05/2022 06:12 pm