ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎತ್ತಿನಹೊಳೆ ವಿಚಾರದಲ್ಲಿ ನಳಿನ್ ಕುಮಾರ್ ದ್ವಂದ್ವ ನೀತಿ : ಸ್ಪಷ್ಟ ನಿಲುವು ಕೇಳಿದ ಕರಾವಳಿಗರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಕಾಂಗ್ರೆಸ್ ಸರಕಾರ ಇದ್ದಾಗ ವಿರೋಧಿಸಿ ಅಂದು ಪಾದಯಾತ್ರೆ ಮಾಡಿದ್ದ ಸಂಸದ ನಳಿನ್ ಕುಮಾರ್ ಕಟೀಲು ರಾಜ್ಯಾಧ್ಯಾಕ್ಷರಾದ ಬಳಿಕ ತಮ್ಮ ರಾಗ ಬದಲಾಯಿಸಿದ್ದಾರೆ. ಇಂದು ಎತ್ತಿನ ಹೊಳೆ ಯೋಜನೆ ತಮ್ಮ ಬಿಜೆಪಿ ಸರಕಾರದ್ದೇ ಕೊಡುಗೆ ಎಂದು ಘೋಷಣೆ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲು ಈ ರೀತಿಯ ನಡೆಗೆ ಕರಾವಳಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಎತ್ತಿನಹೊಳೆ ಯೋಜನೆಯನ್ನು ವಿರೋಧಿಸಿ 2015ರ ಅಕ್ಟೋಬರ್ ನಲ್ಲಿ ನಳಿನ್ ಕುಮಾರ್ ಕಟೀಲು ಅವರು ಮಂಗಳೂರಿನಿಂದ ಹಾಸನ ಗಡಿಯವರೆಗೆ ಪಾದಯಾತ್ರೆ ನಡೆಸಿದ್ದರು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಯೋಜನೆಯನ್ನು ಹಣದ ಲಾಭ ಗಳಿಸಲು ಮಾಡುತ್ತಿದೆ ಎಂದು ಆರೋಪಿಸಿದ್ದರು. ಈ ಯೋಜನೆಗೆ ಇತಿಶ್ರೀ ಹಾಡದಿದ್ದಲ್ಲಿ ಅಯೋಧ್ಯೆ ಮಾದರಿಯಲ್ಲಿ ಕರಸೇವೆ ಮೂಲಕ ಪುಡಿಗಟ್ಟುದಾಗಿ ಹೇಳಿಕೆ ನೀಡಿದ್ದರು.

ಆದರೆ ಬಿಜೆಪಿ ಸರ್ಕಾರ ಬಂದ ಬಳಿಕ ಎತ್ತಿನಹೊಳೆ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಕರಾವಳಿಯ ಬಿಜೆಪಿ ನಾಯಕರು ಸಂಪೂರ್ಣ ಮೃದು ಧೋರಣೆ ತಳೆದಿದ್ದಾರೆ. ಇತ್ತೇಚೆಗೆ ದೊಡ್ಡಬಳ್ಳಾಪುರದಲ್ಲಿ ನಡೆದಿರುವ ಬಿಜೆಪಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎತ್ತಿನ ಹೊಳೆ ಯೋಜನೆ ತಮ್ಮ ಕೊಡುಗೆ ಎಂದು ಘೋಷಣೆ ಮಾಡಿರೋದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನೇತ್ರಾವತಿ, ಕುಮಾರಾಧಾರಾ ನದಿಗೆ ಸೇರುವ ನೀರಿನ ಒರತೆಯ ಸೆಳೆಗಳನ್ನು ತಿರುಗಿಸಿ ಬಯಲು ಸೀಮೆಗೆ ಹರಿಸಿ ಅಲ್ಲಿನ ನೀರಿನ ಭವಣೆಗಳನ್ನು ತೀರಿಸುವ ಯೋಜನೆ ಇದಾಗಿದೆ. ಈ ಮೂಲಕ 400 ಟಿಎಂಸಿಗೂ ಅಧಿಕ ನೀರನ್ನು ಬಯಲುಸೀಮೆಗೆ ಹರಿಸಲಾಗುತ್ತದೆ ಎನ್ನಲಾಗುತ್ತದೆ. ಆದರೆ ಅಂದು ಈ ಯೋಜನೆಯನ್ನು ಖಂಡ ತುಂಡವಾಗಿ ವಿರೋಧಿಸಿದ್ದ ನಳಿನ್ ಕುಮಾರ್ ಕಟೀಲು ಇಂದು ದ್ವಂದ್ವ ನೀತಿ ಅನುಸರಿಸಿರೋದು ಎಷ್ಟು ಸರಿ?. ಆದ್ದರಿಂದ ಅವರು ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಲಿ ಎಂಬ ಮಾತುಗಳು ಕೇಳಿ ಬರುತ್ತಿದೆ.

Edited By : Somashekar
Kshetra Samachara

Kshetra Samachara

18/09/2022 03:40 pm

Cinque Terre

7.47 K

Cinque Terre

2

ಸಂಬಂಧಿತ ಸುದ್ದಿ