ಪಡುಬಿದ್ರಿ: ಕಳೆದ ಗ್ರಾಮಸಭೆಯಲ್ಲಿ ನೀವು ನೀಡಿದ ಭರವಸೆ ಏನಾಯಿತು? ಈ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಂದು ಕೇಳಿದ ಗ್ರಾಮಸ್ಥರ ಪ್ರಶ್ನೆಗೆ ಉಡಾಫೆಯಾಗಿ ಉತ್ತರ ಕೊಟ್ಟ ಇಂಜಿನಿಯರ್ ಓರ್ವನಿಗೆ, ಸಭೆಯಲ್ಲೇ ಗ್ರಾಮಸ್ಥರು ಬೆವರಿಳಿಸಿದ ಘಟನೆಗೆ ತೆಂಕ ಗ್ರಾಮಸಭೆ ಸಾಕ್ಷಿಯಾಯಿತು.
ಬೆಳಿಗ್ಗೆ ಆರಂಭವಾದ ಗ್ರಾಮಸಭೆಗೆ ಮಧ್ಯಾಹ್ನ ಒಂದೂವರೆಗೆ ಆಗಮಿಸಿದ ಹೆದ್ದಾರಿ ಇಲಾಖೆ ಖಾಸಗಿ ಇಂಜಿನಿಯರ್ ಅಮರ್ ಎಂಬಾತನೇ ಗ್ರಾಮಸ್ಥರಿಂದ ಬುದ್ಧಿ ಹೇಳಿಸಿಕೊಂಡವರು. ಇವರು ಸಭೆಗೆ ವಿಳಂಬವಾಗಿ ಆಗಮಿಸಿದ್ದಕ್ಕೆ ಮೊದಲೇ ಸಿಟ್ಟಲ್ಲಿದ್ದ ಗ್ರಾಮಸ್ಥರು ನಂತರ ಉಡಾಫೆ ಉತ್ತರಕ್ಕೆ ಕೆರಳಿ ಹೋದರು, ಗ್ರಾಮಸ್ಥರೆಲ್ಲಾ ಒಟ್ಟಾಗಿ ಆತನ ವಿರುದ್ಧ ಎಗರಾಡುತ್ತಿದಂತೆ ಪರಿಸ್ಥಿತಿ ಅರಿತ ಪೊಲೀಸರು ಮಧ್ಯ ಪ್ರವೇಶಿಸಿ ತಿಳಿಗೊಳಿಸಿದ್ದಾರೆ.
ಕೊನೆಗೆ ಮಾತನಾಡಿದ ನೋಡಲ್ ಅಧಿಕಾರಿ, ನಾವು ಅಧಿಕಾರಿಗಳು. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಬೇಕೆ ವಿನಃ ಅನಗತ್ಯ ಎಗರಾಡಿ ಸಮಸ್ಯೆ ಹುಟ್ಟು ಹಾಕುವುದು ಸರಿಯಲ್ಲ ಎಂದು ಗ್ರಾಮಸ್ಥರನ್ನು ಸಮರ್ಥಿಸಿಕೊಂಡರು.
Kshetra Samachara
22/09/2022 03:53 pm