ಮುಲ್ಕಿ: ಟೋಲ್ ಗೇಟ್ ವಿರೋಧಿ ಹೋರಾಟದ ಕಾವು ತುಳುನಾಡಿನಲ್ಲಿ ಏರುತ್ತಿದ್ದು, ಮುಲ್ಕಿಯಲ್ಲಿ ಮಿಥುನ್ ರೈ ನೇತೃತ್ವದಲ್ಲಿ ಪ್ರಚಾರ ಅಭಿಯಾನ ನಡೆಸಿ ನಾಗರಿಕರಿಗೆ ಟೋಲ್ ಮುತ್ತಿಗೆಗೆ ಸಾತ್ ನೀಡುವಂತೆ ವಿನಂತಿಸಲಾಯಿತು.
ಮುಲ್ಕಿ ಬಸ್ ನಿಲ್ದಾಣದ ಬಳಿ ಟೋಲ್ ವಿರೋಧಿ ಸಮಿತಿ ವತಿಯಿಂದ ಬಸ್ಸುಗಳಿಗೆ ಪೋಸ್ಟರ್ ಅಂಟಿಸುವ ಮೂಲಕ ಟೋಲ್ ಗೇಟ್ ಮುತ್ತಿಗೆಯ ಪ್ರಚಾರದ ಅಭಿಯಾನ ನಡೆಸಲಾಯಿತು. ಈ ಸಂದರ್ಭ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಮಾತನಾಡಿ ಜನರ ತಾಳ್ಮೆ ಪರೀಕ್ಷಿಸುವ ಮೊದಲು ಸರಕಾರ ಕೂಡಲೇ ಎಚ್ಚೆತ್ತು ಸುರತ್ಕಲ್ ಎನ್ ಐ.ಟಿ.ಕೆ ಅಕ್ರಮ ಟೋಲ್ ತೆರವುಗೊಳಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಟೋಲ್ ಮುತ್ತಿಗೆ ಸಹಿತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭ ಟೋಲ್ ವಿರೋಧಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ವಸಂತ್ ಬೆರ್ನಾಡ್, ಮೋಹನ್ ಕೋಟ್ಯಾನ್ ಮಂಜುನಾಥ ಕಂಬಾರ, ಯೋಗೀಶ್ ಕೋಟ್ಯಾನ್ ಮತ್ತಿತರರು ಇದ್ದರು
Kshetra Samachara
13/10/2022 08:23 pm