ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರಕಾರವು ಉಗ್ರ ಸಂಘಟನೆಗಳೊಂದಿಗೆ ನಂಟು ಇಟ್ಟುಕೊಂಡಿರುವ ಪಿಎಫ್ಐ ಹಾಗೂ ಅದರ ಸಹ ಸಂಘಟನೆಗಳ ಮೇಲೆ ಐದು ವರ್ಷಗಳ ಕಾಲ ನಿರ್ಬಂಧ ಹೇರಿದೆ. ಇದನ್ನು ಅಖಿಲ ಭಾರತ ಹಿಂದೂ ಮಹಾಸಭಾ ಸ್ವಾಗತಿಸುತ್ತದೆ. ಆದರೆ ಈ ಸಂಘಟನೆಗಳ ರಾಜಕೀಯ ಮುಖವಾಣಿಯಾಗಿರುವ SDPI ಯನ್ನು ನಿರ್ಬಂಧಿಸದೆ ಏನೂ ಪ್ರಯೋಜನವಿಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದರು.
ಆದ್ದರಿಂದ ಎಲ್ಲಿಯವರೆಗೆ SDPIಯನ್ನು ಬ್ಯಾನ್ ಮಾಡಲಾಗುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯವಾಗಿ ಅವರು ಅಧಿಕಾರಕ್ಕೇರಿ ಇನ್ನಷ್ಟು ಹಿಂದೂಗಳಿಗೆ ತೊಂದರೆ ಮಾಡುವ ಎಲ್ಲಾ ಸಾಧ್ಯತೆಗಳಿದೆ. ಆದ್ದರಿಂದ ಬಿಜೆಪಿ ಸರಕಾರದ ಇಚ್ಛಾಶಕ್ತಿಯಲ್ಲಿ ದೋಷವಿರುವುದು ಎದ್ದು ಕಾಣುತ್ತಿದೆ. ತಕ್ಷಣ SDPIಯನ್ನು ನಿರ್ಬಂಧ ಮಾಡಿ ಎಂದು ಹೇಳಿದರು.
ವಿದ್ವಂಸಕ ಕೃತ್ಯ ಮಾಡುತ್ತಿದ್ದ ಸಂಘಟನೆಗಳು ಇನ್ನೂ ಏನೂ ಮಾಡುವಂತಿಲ್ಲ ಎಂಬುದು ಸಂತೋಷಕರ ವಿಚಾರವಾದರೂ, ಆದರೆ ಅವರು ಬೇರೆ ಸಂಘಟನೆಗಳನ್ನು ಹುಟ್ಟುಹಾಕಬಹುದು. ಹೀಗೆ ಸರಕಾರದಲ್ಲಿ ನ್ಯೂನತೆ ಎಷ್ಟಿದೆ ಎಂದರೆ ಪಿಎಫ್ಐ ಸಂಘಟನೆಗಳು ಬೇರೆ ಹೆಸರಿನಲ್ಲಿ ನಾಳೆ ತಲೆಯೆತ್ತಬಹುದು. ಆದ್ದರಿಂದ ಯಾವುದೇ ಕಾರಣಕ್ಕೆ ಈ ದೇಶದಲ್ಲಿ ಮುಸ್ಲಿಮರಿಗೆ, ಮುಸ್ಲಿಂ ಸಂಘಟನೆಗಳಿಗೆ ಅವಕಾಶ ಕೊಡಬಾರದು ಎಂದರು.
Kshetra Samachara
28/09/2022 07:15 pm