ಕಾಪು: ಬೆಳಪು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪಡುಬಿದ್ರಿ ರೈಲು ನಿಲ್ದಾಣ ರಸ್ತೆ ಡಂಪಿಂಗ್ ಯಾರ್ಡ್‌ನಂತಾಗಿ ಮೂಗು ಮುಚ್ಚಿ ಸಾಗಬೇಕಾದ ದುಸ್ಥಿತಿ ಬಂದೊದಗಿದೆ.
ಬೆಳಪು ಗ್ರಾಪಂ ವ್ಯಾಪ್ತಿಯಲ್ಲಿ 25 ವರ್ಷಗಳ ಹಿಂದೆ ಸ್ಥಾಪನೆಯಾಗಿರುವ ಪಡುಬಿದ್ರಿ ರೈಲು ನಿಲ್ದಾಣ ಸಹಿತ ಕೇವಲ 100 ಮೀ. ದೂರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ನಿರ್ಮಾಣ ಹಂತದಲ್ಲಿರುವ ದಕ್ಷಿಣ ಭಾರತದಲ್ಲಿಯೇ ಮಾದರಿಯಾದ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರಕ್ಕೆ ಉಚ್ಚಿಲ- ಪಣಿಯೂರು ರಸ್ತೆಯಿಂದ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆಯೇ ತ್ಯಾಜ್ಯ ಹರಡಿದೆ. ಇಕ್ಕೆಲದಲ್ಲಿ ದಟ್ಟವಾಗಿ ಬೆಳೆದ ಹುಲ್ಲು- ಪೊದೆ ರಸ್ತೆ ಆವರಿಸಿದ್ದು, ನಿತ್ಯ ಸಂಚಾರಿಗಳು ಹಿಡಿಶಾಪ ಹಾಕುವಂತಾಗಿದೆ.
ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆ ಕೊಂಕಣ ರೈಲ್ವೆ ವ್ಯಾಪ್ತಿಗೆ ಸೇರಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ವಿಭಾಗದ ಗಮನಕ್ಕೆ ತಂದು ತ್ಯಾಜ್ಯಕ್ಕೆ ಮುಕ್ತಿ ನೀಡಬೇಕಿದೆ.
Kshetra Samachara
11/09/2022 08:26 pm