ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಅಪಾಯದ ಕರೆಗಂಟೆ ಬಾರಿಸುತ್ತಿದೆ ಸರ್ವಿಸ್ ರಸ್ತೆಯ ಪಕ್ಕದ "ಮೋರಿ" !

ಕುಂದಾಪುರ: ಚತುಷ್ಪಥ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಕುಂದಾಪುರದ ಸಾರ್ವಜನಿಕರು ಮತ್ತು ಸವಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದೂ ಸಾಲದೆಂಬಂತೆ ನವಯುಗ್ ಸಂಸ್ಥೆ ಮತ್ತೊಂದು ಅವಾಂತರ ಮಾಡಿ ಸಾರ್ವಜನಿಕರ, ವಾಹನ ಸವಾರರ ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದೆ.

ಎರಡು ವಾರಗಳ ಹಿಂದೆ ಸುರಿದ ಧಾರಾಕಾರ ಮಳೆಯು ವಡೇರಹೋಬಳಿಯ ಸರ್ವಿಸ್ ರಸ್ತೆಗಳನ್ನು ಸಂಪೂರ್ಣ ಮುಳುಗಿಸಿ ಸಂಚಾರವನ್ನು ದುಸ್ತರವಾಗಿಸಿತ್ತು. ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ನವಯುಗ್ ಸಂಸ್ಥೆ ರಸ್ತೆಯಲ್ಲಿ ನಿಂತಿದ್ದ ಅವೈಜ್ಞಾನಿಕ ರೀತಿಯಲ್ಲಿ ತೆರವು ಮಾಡಿತ್ತು. ಬಳಿಕ ಮೂರುಕೈ ಬಳಿಯ ಅನತಿ ದೂರದಿಂದ ಸುಮಾರು 60 ಅಡಿ ದೂರದ ತನಕ ಜೆಸಿಬಿಯನ್ನು ಬಳಸಿ ಸರ್ವಿಸ್ ರಸ್ತೆಯ ಎಡಭಾಗವನ್ನು 4-5ಅಡಿ ಆಳದ ತನಕ ಅಗೆದು ಹಾಕಿತ್ತು.ಆದರೆ ಸರ್ವಿಸ್ ರಸ್ತೆಯನ್ನು ಆವರಿಸಿದ ನೀರು ಅಗೆದು ಹಾಕಿದ ಆಳದ ಮೋರಿ ಸೇರಿ ಹಳ್ಳದಂತಾಯಿತೇ ವಿನಾ ನೀರಂತೂ ಹರಿದು ಹೋಗಲೇ ಇಲ್ಲ. ಮತ್ತೆ ಪಂಪ್ ಸೆಟ್‌ಗಳನ್ನು ಬಳಸಿ ಒಂದಷ್ಟು ನೀರನ್ನು ಹೊರ ಹಾಕಲಾಯಿತು. ಇದೀಗ ಆಳದ ಮೋರಿಯಲ್ಲಿ ಮಳೆ ನೀರು ತುಂಬಿಕೊಂಡಿದ್ದು ಸಣ್ಣ ಚರಂಡಿ ಎಂದು ಭಾವಿಸಿ ಪಾದಚಾರಿಗಳು, ವಾಹನ ಸವಾರರು ಎಡ ಭಾಗಕ್ಕೆ ಸರಿದರೆ ಅಪಾಯ ಖಂಡಿತ. ತಕ್ಷಣ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕಿದೆ.

Edited By : Somashekar
Kshetra Samachara

Kshetra Samachara

26/08/2022 12:32 pm

Cinque Terre

9.18 K

Cinque Terre

0

ಸಂಬಂಧಿತ ಸುದ್ದಿ