ಮುಲ್ಕಿ: ತಾಲ್ಲೂಕಿನಲ್ಲಿ ಭಾರೀ ಮಳೆಗೆ ನೂರಾರು ಎಕರೆ ಕೃಷಿ ಭೂಮಿ ನಾಶವಾಗಿದ್ದು ಸಾವಿರಾರು ಎಕರೆ ತೋಟ ಹಾನಿಯಾಗಿದೆ.
ತಾಲ್ಲೂಕಿನ ಕೆಮ್ರಾಲ್, ಪಂಜ ಗ್ರಾಮದಲ್ಲಿ ಭಾರೀ ಹಾನಿಯಾಗಿದ್ದು ನಂದಿನ ನದಿಯ ನೀರು ನುಗ್ಗಿ 300 ಎಕರೆಗಳಷ್ಟು ಕೃಷಿ ನಾಶವಾಗಿದೆ.
ಪಂಜ, ಕೊಯ್ಕುಡೆ, ಕೆಮ್ರಾಲ್ ಭಾಗದ ಭತ್ತದ ಗದ್ದೆಯಲ್ಲಿ ಇನ್ನೂ ಇಳಿಯದ ನೆರೆಯಿಂದಾಗಿ ಭಾರೀ ಪ್ರಮಾಣದ ಭತ್ತ ನಾಶವಾಗಿ ರೈತರಿಗೆ ಸಂಕಷ್ಟ ಎದುರಾಗಿದೆ.
ಅಡಿಕೆ, ತೆಂಗು ಮತ್ತು ಬಾಳೆ ತೋಟಗಳಿಗೆ ಭಾರೀ ಪ್ರಮಾಣದ ಹಾನಿ ಉಂಟಾಗಿದ್ದು ಕೃಷಿಯನ್ನೇ ನಂಬಿರುವ ಕುಟುಂಬಗಳು ಕಂಗಾಲಾಗಿವೆ.
ಈ ಬಗ್ಗೆ ಕೃಷಿಕ ಸತೀಶ್ ಶೆಟ್ಟಿ ಬೈಲಗುತ್ತು ಮಾತನಾಡಿ ಕೃಷಿ ಹಾನಿಗೆ ಹೆಚ್ಚಿನ ಸಹಾಯಧನ ನೀಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಕೆಮ್ರಾಲ್ ಗ್ರಾಪಂ ಉಪಾಧ್ಯಕ್ಷ ಸುರೇಶ್ ಪಂಜ ಮಾತನಾಡಿ ನಂದಿನಿ ನದಿಯಲ್ಲಿ ಹೂಳು ತುಂಬಿದ್ದರಿಂದ ಕೃತಕ ನೆರೆ ಉಂಟಾಗಿ ಕೃಷಿ ನಾಶ ಉಂಟಾಗುತ್ತಿದ್ದು ಕೂಡಲೇ ನದಿಯ ಹೂಳೆತ್ತುವುದರ ಜೊತೆಗೆ ತಡೆಗೋಡೆ ನಿರ್ಮಾಣ ಅಗತ್ಯ ಎಂದು ಸರಕಾರವನ್ನು ಒತ್ತಾಯಿಸಿದ್ದಾರೆ.
Kshetra Samachara
14/07/2022 07:13 pm