ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಮಾಡಿದ ಎನ್ಇಸಿಎಫ್ ತಂಡ; ಮನಪಾ ಮುಂಭಾಗ ರಾಶಿ!

ಮಂಗಳೂರು: ನಗರದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಫ್ಲೆಕ್ಸ್ ಗಳನ್ನು ತೆರವು ಮಾಡಿರುವ ಎನ್ಇಸಿಎಫ್ ತಂಡ ಮಂಗಳೂರು ಮನಪಾ ಮುಂಭಾಗ ರಾಶಿ ಹಾಕಿದೆ.

ಎನ್ಇಸಿಎಫ್ ತಂಡ ನಗರದ ಉರ್ವಸ್ಟೋರ್, ಬಿಜೈ, ಮಣ್ಣಗುಡ್ಡೆ, ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳ 3ಕಿ.ಮೀ. ವ್ಯಾಪ್ತಿಯಲ್ಲಿ ಮರಗಳಿಗೆ ಕಟ್ಟಲಾಗಿರುವ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವುಗೊಳಿಸಿದೆ‌. ಹೀಗೆ ತೆಗೆದಿರುವ ಫ್ಲೆಕ್ಸ್, ಬ್ಯಾನರ್ ಗಳನ್ನು ಮಂಗಳೂರು ಮನಪಾ ಮುಂಭಾಗ ರಾಶಿ ಹಾಕಿದ್ದಾರೆ.

ಈ ಬಗ್ಗೆ ಎನ್ಇಸಿಎಫ್ ಮುಖಂಡ ಶಶಿಧರ್ ಶೆಟ್ಟಿ ಪ್ರತಿಕ್ರಿಯಿಸಿ, ನಿಷೇಧಿತ ಬ್ಯಾನರ್, ಫ್ಲೆಕ್ಸ್ ಅಳವಡಿಸಿರುವವರ ಕಠಿಣ ಕ್ರಮ ಕೈಗೊಳ್ಳಲು ಮನಾಪಕ್ಕೆ ಮೂರು ಬಾರಿ ಎನ್ಇಸಿಎಫ್ ನೋಟಿಸ್ ನೀಡಿದೆ. ಅವರು ಕೇವಲ ಪ್ರಕಟಣೆ ಮಾತ್ರ ಮಾಡುತ್ತಾರೆ ವಿನಃ ಫ್ಲೆಕ್ಸ್ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

12/07/2022 12:33 pm

Cinque Terre

7.03 K

Cinque Terre

1

ಸಂಬಂಧಿತ ಸುದ್ದಿ