ಮುಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ವ ಕುಡಿಯುವ ನೀರಿನ ಟ್ಯಾಂಕ್ ಬಳಿ ಜಲಜೀವನ್ ಮೆಷಿನ್ ಕುಡಿಯುವ ನೀರಿನ ಕಾಮಗಾರಿ ಅರ್ಧಂಬರ್ಧ ನಡೆದಿದ್ದು, ಗ್ರಾಮಸ್ಥರು ಹೈರಾಣಾಗಿದ್ದಾರೆ.
ಕುಡಿಯುವ ನೀರಿನ ಪೈಪಿನ ಕಾಮಗಾರಿಗಾಗಿ ಬೇಕಾಬಿಟ್ಟಿಯಾಗಿ ಹೊಂಡ ತೋಡಿದ್ದು, ಕಾಮಗಾರಿ ಅರ್ಧದಲ್ಲಿಯೇ ನಿಲ್ಲಿಸಿ ಹೋಗಿದ್ದಾರೆ. ಪೈಪುಗಳನ್ನು ಸ್ಥಳೀಯ ಮನೆಯೊಂದರ ಎದುರುಗಡೆ ಅಪಾಯಕಾರಿ ರೀತಿಯಲ್ಲಿ ಹಾಕಲಾಗಿದೆ.
ಈ ನಡುವೆ ಕುಡಿಯುವ ನೀರಿನ ಎರಡು ಪೈಪುಗಳು ರಸ್ತೆಯಲ್ಲಿ ಬಿದ್ದುಕೊಂಡಿದ್ದು, ಹಾವು ಇತ್ಯಾದಿ ಜೀವಿಗಳು ಪೈಪಿನ ಒಳಗಡೆ ಹೋಗಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತ್ಯಾಜ್ಯ ವಿಲೇವಾರಿ ಘಟಕದ ಬದಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುತ್ತಿದ್ದು, ಆರೋಗ್ಯಕ್ಕೆ ಬಾಧಕವಾಗುವ ಸಾಧ್ಯತೆ ಇದೆ.
ಈ ಬಗ್ಗೆ ಕೂಡಲೇ ಪಂಚಾಯತ್ ಅಧ್ಯಕ್ಷರು ಜಲಜೀವನ್ ಮೆಷಿನ್ ಕಾಮಗಾರಿಯ ಗುತ್ತಿಗೆದಾರರಿಗೆ ಕೂಡಲೇ ಕಾಮಗಾರಿಯನ್ನು ನಡೆಸಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Kshetra Samachara
10/07/2022 10:22 pm