ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ವಿಜಯ ಸನ್ನಿಧಿ ನಿಲ್ದಾಣದ ಮಿಷನ್ ಕಂಪೌಂಡ್ ಬಳಿ ಹೆದ್ದಾರಿ ಸರ್ವಿಸ್ ರಸ್ತೆ ಸಮೀಪ ಗುಡ್ಡ ಕುಸಿತವಾಗಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ಅನೇಕ ವಾಹನಗಳು ಶಾಲಾಮಕ್ಕಳು ಓಡಾಟ ನಡೆಸುತ್ತಿದ್ದು ಅಪಾಯಕಾರಿ ಮರಗಳಿಂದ ಹಾಗೂ ಗುಡ್ಡ ಕುಸಿತದಿಂದ ಪ್ರಯಾಣಕ್ಕೆ ಸಂಚಕಾರ ಎದುರಾಗಿದೆ.
ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಈಗಾಗಲೇ ಸೂಕ್ತ ಸರ್ವಿಸ್ ರಸ್ತೆ ವ್ಯವಸ್ಥೆ ಇಲ್ಲದೆ ಬಪ್ಪನಾಡು ವಿಜಯ ಸನ್ನಿಧಿ ,ಬಸ್ಸು ನಿಲ್ದಾಣದ ಜಂಕ್ಷನ್ ಗಳಲ್ಲಿ ಅನೇಕ ಅಪಘಾತಗಳು ಸಂಭವಿಸಿದ್ದು ಇದೀಗ ಹೆದ್ದಾರಿ ಬದಿಯ ಗುಡ್ಡ ಕುಸಿತದಿಂದ ಮತ್ತಷ್ಟು ಪ್ರಯಾಣ ಅಪಾಯಕಾರಿಯಾಗಿ ಪರಿಣಮಿಸಿದೆ.
ಕೂಡಲೇ ಅಧಿಕಾರಿಗಳು ಎಚ್ಚೆತ್ತು ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ನಿರಂಜನ್ ಬಂಗೇರ ಹರಿಪಾದೆ ಆಗ್ರಹಿಸಿದ್ದಾರೆ.
Kshetra Samachara
28/06/2022 07:58 pm