ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂದಿರಾನಗರ ಕಾಲೇಜು ರಸ್ತೆಯಲ್ಲಿ ಜಲಜೀವನ್ ಮಿಷಿನ್ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಅರ್ಧಂಬರ್ಧ ನಡೆದಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ.
ಕಳೆದ 15 ದಿನಗಳಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಂಚಾರ ದುಸ್ತರವಾಗಿದೆ.
ಕುಡಿಯುವ ನೀರಿನ ಪೈಪ್ ಲೈನ್ ಹಾಕಲು ರಸ್ತೆಯ ಬದಿ ಅಗೆದು ಹಾಗೆಯೇ ಬಿಟ್ಟಿದ್ದು ಭಾರೀ ಮಳೆ ಬಂದರೆ ಪರಿಸರದಲ್ಲಿ ಕೃತಕ ನೆರೆ ಭೀತಿ ಎದುರಾಗಿದ್ದು ಸಂಚಾರ ಅಪಾಯಕಾರಿಯಾಗುವ. ಸಾಧ್ಯತೆ ಇದೆ.
ಇಂದ್ರನಗರ ಕಾಲೇಜಿಗೆ ಹೋಗುವ ಹಾಗೂ ಮಸೀದಿಯ ಪ್ರಧಾನ ರಸ್ತೆ ಇದಾಗಿದ್ದು ಈಗಾಗಲೇ ಇದರಿಂದ ಅನೇಕ ಅಪಘಾತಗಳು ಸಂಭವಿಸಿದ್ದು ರಸ್ತೆ ಬದಿಯ ವಿದ್ಯುತ್ ಕಂಬ ಕೂಡಾ ಅಪಾಯದ ಸ್ಥಿತಿಯಲ್ಲಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಮಳೆಗಾಲ ಶುರುವಾಗುವ ಮೊದಲು ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕಿತು ಮಾಡಬೇಕೆಂದು ಸ್ಥಳೀಯರಾದ ಕೇಶವ ಆಗ್ರಹಿಸಿದ್ದಾರೆ.
Kshetra Samachara
16/06/2022 07:03 pm