ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ:ಶಾಲಾ ಆವರಣದೊಳಗೆ ಮಲೀನ ನೀರು; ದುರ್ವಾಸನೆಯಲ್ಲಿ ಪಾಠ ಕೇಳುತ್ತಿರೋ ಪುಟಾಣಿಗಳು!

ಉಪ್ಪಿನಂಗಡಿ: ಒಂದೆಡೆ ನೂರಾರು ಪುಟಾಣಿಗಳ ಚಿಲಿಪಿಲಿ ಕಲರವ. ಮತ್ತೊಂದೆಡೆ ಶಾಲಾ ಮೈದಾನವಿಡೀ ಹರಿಯುತ್ತಿರುವ ತ್ಯಾಜ್ಯ ನೀರು. ಸೊಳ್ಳೆ ಕಾಟ. ಮೂಗು ಮುಚ್ಚಿಕೊಳ್ಳುವಷ್ಟು ದುರ್ವಾಸನೆ. ಹೌದು.! ಇದೆಲ್ಲದರ ನಡುವೆಯೇ ಪಾಠ ಕೇಳಬೇಕಾದ ಶೋಚನೀಯ ಸ್ಥಿತಿ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿ ಹಾಗೂ ಅಂಗನವಾಡಿಯ ಪುಟಾಣಿಗಳದ್ದಾಗಿದೆ.

ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಲ್‌ಕೆಜಿ, ಯುಕೆಜಿ ಕಟ್ಟಡದ ಆವರಣದೊಳಗೆ ಅಂಗನವಾಡಿ ಕೇಂದ್ರವೂ ಇದ್ದು, ಸರಕಾರಿ ಶಾಲೆಯಲ್ಲಿ ಆರಂಭವಾಗಿರುವ ಎಲ್‌ಕೆಜಿ, ಯುಕೆಜಿಗೆ ಈ ಬಾರಿ 95 ರಷ್ಟು ಮಕ್ಕಳು ಪ್ರವೇಶಾತಿಯನ್ನು ಪಡೆದಿದ್ದಾರೆ. ಅದರ ಬಳಿಯೇ ಇರುವ ಅಂಗನವಾಡಿಯಲ್ಲಿ 30-40 ರಷ್ಟು ಮಕ್ಕಳಿದ್ದಾರೆ. ಆದರೆ ಇವರು ಇಲ್ಲಿ ದುರ್ವಾಸನೆಯಲ್ಲೇ ಕಾಲ ಕಳೆಯಬೇಕಾದ ಸ್ಥಿತಿ ಈಗ ಎದುರಾಗಿದೆ.

ಇದಕ್ಕೆ ಕಾರಣ ಇದರ ಸಮೀಪವೇ ಇರುವ ಖಾಸಗಿ ವಸತಿ ಸಮುಚ್ಛಯ, ಮನೆಗಳಿಂದ ಮಲೀನ ನೀರು ಬಂದು ಶಾಲಾ ಆವರಣಕ್ಕೆ ಸೇರುತ್ತಿರುವುದು. ಶಾಲೆಯ ಆವರಣದಲ್ಲಿಯೇ ನೆಲದಡಿ ಮೋರಿಯನ್ನು ಹಾಕಿ ಖಾಸಗಿ ವಸತಿ ಸಮುಚ್ಛಯಗಳಿಂದ ಮಲೀನ ನೀರನ್ನು ಪಕ್ಕದ ಚರಂಡಿಗೆ ಹರಿಯಬಿಡಲಾಗುತ್ತಿತ್ತು. ಆದರೆ ಈ ಮೋರಿಯು ಮೂರು ಕಡೆ ಒಡೆದು ಹೋಗಿ ಮಲೀನ ನೀರೆಲ್ಲಾ ಶಾಲಾ ಮೈದಾನಕ್ಕೆ ಬರುತ್ತಿತ್ತು. ಆಗ ಗ್ರಾ.ಪಂ.ಇದಕ್ಕೆ ಸಿಮೆಂಟ್ ಹಾಕಿ ಸಂಪೂರ್ಣ ಮೋರಿಯನ್ನೇ ಬಂದ್ ಮಾಡಿತ್ತು.

ಆದರೆ ಕಳೆದ ಭಾನುವಾರ ಯಾರೋ ಈ ಮೋರಿಯನ್ನು ಒಡೆದು ಓಪನ್ ಮಾಡಿದ್ದು,ಈಗ ಮಲೀನ ನೀರೆಲ್ಲಾ ಶಾಲಾ ಆವರಣದೊಳಗೆ ಬಂದು ಸೇರುತ್ತಿದೆ. ಒಬ್ಬ ಬಡವ ಮನೆ ನಿರ್ಮಿಸುವಾಗ ಇಂಗುಗುಂಡಿ ರಚಿಸದೇ ಡೋರ್ ನಂಬರ್ ನೀಡುವುದಿಲ್ಲ ಎಂದು ಕಠಿಣ ನಿಲುವು ತಾಳುವ ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯು, ಖಾಸಗಿ ವಸತಿ ಸಂಕೀರ್ಣದಿಂದ ಮಲೀನ ನೀರು ಬಂದು ಶಾಲಾ ಪರಿಸರದ ಸ್ವಚ್ಛತೆಗೆ, ಮಕ್ಕಳ ಆರೋಗ್ಯಕ್ಕೆ ಧಕ್ಕೆಯಾಗುತ್ತಿದ್ದರೂ, ಅವರ ಬಗ್ಗೆ ಯಾವುದೇ ಕಠಿಣ ಕ್ರಮ ತಾಳುವುದಿಲ್ಲ ಎಂಬ ಆಕ್ರೋಶ ಮಕ್ಕಳ ಪೋಷಕರಿಂದ ಕೇಳಿ ಬರುತ್ತಿದೆ.

Edited By : Somashekar
Kshetra Samachara

Kshetra Samachara

15/06/2022 05:57 pm

Cinque Terre

9.37 K

Cinque Terre

1

ಸಂಬಂಧಿತ ಸುದ್ದಿ