ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸರೆ ನೆರವಿನ ಹಸ್ತ : ಬಾಳೆಪುಣಿಯಲ್ಲಿ ನೂತನ ತಾರಸಿ ಮನೆ ನಿರ್ಮಾಣ

ಉಳ್ಳಾಲ: ಕೈರಂಗಳ ಶಾರದಾ ಗಣಪತಿ ವಿದ್ಯಾ ಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಂ ಭಟ್ ಅವರು ದಾನಿಗಳ ನೆರವಿಂದ ಅಶಕ್ತರಿಗಾಗಿ ಆರಂಭಿಸಿದ "ಆಸರೆ" ನೆರವಿನ ಹಸ್ತದ ಎರಡನೇ ಯೋಜನೆಯಡಿ ಗದಗ ಮೂಲದ ದಿ.ಶರಣಪ್ಪ ಅವರ ಕುಟುಂಬಕ್ಕೆ ಸುಸಜ್ಜಿತ ಗ್ರಾನೈಟ್ ನೆಲದ ತಾರಸಿ ಮನೆಯನ್ನ ನಿರ್ಮಿಸಿ ಕೊಟ್ಟಿದ್ದಾರೆ.

ಬಾಳೆಪುಣಿ ಗ್ರಾಮದ ಕುಕ್ಕುದ ಕಟ್ಟೆಯಲ್ಲಿ ಗದಗ ಮೂಲದ ದಿ.ಶರಣಪ್ಪ ಅವರ ಮಕ್ಕಳಿಗೆ ನಿರ್ಮಿಸಿದ ಸುಸಜ್ಜಿತ "ಆಸರೆ"ಮನೆಯ ಕೀಲಿ ಕೈಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಅವರು ಫಲಾನುಭವಿಗಳಿಗೆ ಹಸ್ತಾಂತರಿಸಿದರು.

ಆಸರೆ ಯೋಜನೆಯ ಮೊದಲ ಮನೆ ನರಿಂಗಾನ ಗ್ರಾಮದ ಅಂಬುಗದ ನಾರಾಯಣ ಪೂಜಾರಿಯವರಿಗೆ ನಿರ್ಮಿಸಿ ಕೊಡಲಾಗಿತ್ತು.ಇದೀಗ ಎರಡನೆಯ ಮನೆಯನ್ನ ಶರಣಪ್ಪ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು,ನೂಜಿ ಪಡ್ಪುವಿನ ಮಾಧವ ಪೂಜಾರಿ,ಚೇಳೂರಿನ ಸುರೇಶ್ ಪೂಜಾರಿ,ತಲೆಮುಗೇರಿನ ಕಮಲಾ ಪೂಜಾರ್ತಿ ಅವರ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡಲು ಯೋಜನೆ ರೂಪಿಸಲಾಗಿದೆ.

ದಿ.ಶರಣಪ್ಪರ ಕುಟುಂಬವು ಕಳೆದ ಮೂವತ್ತು ವರುಷಗಳಿಂದ ಬಾಳೆಪುಣಿಯಲ್ಲಿ ನೆಲೆಸಿದ್ದು, ತರ್ಪಾಲಿನ ಟೆಂಟಲ್ಲಿ ವಾಸವಿತ್ತು.ಇದೀಗ ಈ ಕುಟುಂಬಕ್ಕೆ ನೆಲೆಸಲು ಸುಸಜ್ಜಿತ ಮನೆಯೊಂದು ಸಿಕ್ಕಿದಂತಾಗಿದೆ.

ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಚೌಟ ಉಳಿಪಾಡಿಗುತ್ತು,ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಮೊದಲಾದವರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

04/09/2022 11:15 am

Cinque Terre

10.34 K

Cinque Terre

1

ಸಂಬಂಧಿತ ಸುದ್ದಿ