ಉಡುಪಿ: ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿದ್ದ ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಉಡುಪಿಯಲ್ಲಿ ಬಹಳಷ್ಟು ವರ್ಷಗಳಿಂದ ಇಂತಹ ಮಾನವೀಯ ಸೇವೆ ಮಾಡುತ್ತಿರುವ ನಿತ್ಯಾನಂದ ಒಳಕಾಡು, ಈತನಕ ನೂರಕ್ಕೂ ಹೆಚ್ಚು ಅನಾಥ ಶವಗಳಿಗೆ ಮುಕ್ತ ನೀಡಿದ್ದಾರೆ.
ನಗರದ ಬೀಡಿನಗುಡ್ಡೆಯ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡುವಾಗ, ಉಡುಪಿ ಠಾಣೆಯ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಇದ್ದರು. ಹೊಸಬೆಳೆಕು ಆಶ್ರಮದ ತನುಲಾ ತರುಣ್, ವಿನಯಚಂದ್ರ ಸಾಸ್ತಾನ, ಪ್ರದೀಪ್, ಸೋನಿಯಾ ಅಜ್ಜರಕಾಡು ಈ ಕಾರ್ಯದಲ್ಲಿ ಕೈಜೋಡಿಸಿದರು. ಫ್ಲವರ್ ವಿಷ್ಣು, ಸುಶೀಲ ರಾವ್ ಉಡುಪಿ, ಅಣ್ಣಪ್ಪ ಪೂಜಾರಿ ಕರಂಬಳ್ಳಿ ಈ ಮಾನವೀಯ ಕಾರ್ಯದಲ್ಲಿ ಸಹಕರಿಸಿದರು.
Kshetra Samachara
30/04/2022 05:08 pm