ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್:3 ನೇ ದಿನದ ಎನ್ಐಟಿಕೆ ಟೋಲ್ ಗೇಟ್ ವಿರುದ್ಧದ ಪ್ರತಿಭಟನೆ ನಡುವೆ ಮಾನವೀಯತೆ

ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್ ಗೇಟ್ ಸುಲಿಗೆಯ ವಿರುದ್ಧ ಆಸೀಫ್ ಆಪದ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿರಿಸಿದ್ದು ಪ್ರತಿಭಟನೆ ನಡುವೆ ಆಸೀಫ್ ಆಪದ್ಬಾಂಧವ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.

ಮೂರನೇ ದಿನದ ಪ್ರತಿಭಟನೆ ನಡುವೆ ಪ್ರತಿಭಟನೆ ಸ್ಥಳದಲ್ಲಿ ಹಸಿದು ಆಹಾರವನ್ನು ಹುಡುಕಿಕೊಂಡು ವೇದಿಕೆಗೆ ಬಂದ ಮಾನಸಿಕ ನೊಂದ ವ್ಯಕ್ತಿಯನ್ನು ಆಸೀಫ್ ಆಪತ್ಬಾಂಧವ, ಸ್ವಚ್ಛಗೊಳಿಸಿ ಸ್ನಾನಮಾಡಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ತಮ್ಮ ಆಸೀಫ್ ಆಪತ್ಬಾಂಧವ ಆಶ್ರಮದಲ್ಲಿ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

ಬಳಿಕ ಪ್ರತಿಭಟನೆಯ ನೇತೃತ್ವ ವಹಿಸಿ ಆಸೀಫ್ ಆಪದ್ಬಾಂಧವ ಮಾತನಾಡಿ, 24 ಗಂಟೆ ರಸ್ತೆ ನಿರ್ವಹಣೆ ಮಾಡಬೇಕು, ಹೆದ್ದಾರಿಯುದ್ದಕ್ಕೂ ದಾರಿ ದೀಪ, ಅಲ್ಲಲ್ಲಿ ಕುಡಿಯುವ ನೀರು, ವಿಶ್ರಾಂತಿ ಜಾಗ ಇರಬೇಕು ಎಂಬ ನಿಯಮವಿದ್ದರೂ ಅದನ್ನು ಪೂರೈಸದೆ ಟೋಲ್ ಗೇಟ್ ನಲ್ಲಿ ಶುಲ್ಕ ವಸೂಲು ನಡೆಯುತ್ತಿದೆ. ಅಕ್ರಮ ಸುಲಿಗೆ ಮಾಡುತ್ತಿರುವ ಟೋಲ್ ಕೇಂದ್ರವನ್ನು ಬಂದ್ ಮಾಡಬೇಕು ಎಂದು ಒತ್ತಾಯಿಸಿದರು.

ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಕಾಪು ತಾಲೂಕು ಅಧ್ಯಕ್ಷ ಲೋಕೇಶ್ ಪಡುಬಿದ್ರಿ, ಮಾಜಿ ಮೇಯರ್ ಅಶ್ರಫ್, ಎಸ್ಡಿಪಿಐ ಕನ್ನಡ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆ, ಗಡಿನಾಡ ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ, ಎಸ್ಡಿಪಿಐ ಸುರತ್ಕಲ್ ಬ್ಲಾಕ್ ಅಧ್ಯಕ್ಷರಾದ ಅಬ್ದುಲ್ ಸಲಾಂ, ಕಾರ್ಯದರ್ಶಿ ಮೊಹಮ್ಮದ್ ಅರಫಾತ್ ಧರಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

09/02/2022 07:58 pm

Cinque Terre

5.68 K

Cinque Terre

0

ಸಂಬಂಧಿತ ಸುದ್ದಿ