ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ: 600 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹ

ಬೈಂದೂರು: ಉಡುಪಿ ಜಿಲ್ಲೆಯಾದ್ಯಂತ ಡಾ. ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಏಕಕಾಲದಲ್ಲಿ ಬಗ್ವಾಡಿ, ಮರವಂತೆ, ಉಪ್ಪುಂದ ಸೇರಿದಂತೆ ಹಲವು ಕಡೆ ಮೀನುಗಾರರ ಸಮಾಜ ಬಾಂಧವರು ಹಾಗೂ ಹಲವು ಸಂಘ ಸಂಸ್ಥೆಗಳಿಂದ 600ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಣೆಯಾಗಿದೆ. ಹೆಚ್ಚುತ್ತಿರುವ ಅಪಘಾತಗಳು ಹಾಗೂ ಅನಾರೋಗ್ಯದ ಸಮಸ್ಯೆಗೆ ಹೆಚ್ಚು ರಕ್ತದ ಅವಶ್ಯಕತೆ ಇರುವುದರಿಂದ ಜೀವನದ ಮೌಲ್ಯ ಅರಿತ ಯುವ ಜನತೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರಕ್ಕೆ ಪಾಲ್ಗೊಂಡರು.

ಡಾ. ಜಿ. ಶಂಕರ್, ಹಾಗೂ ಆನಂದ್ ಸಿ ಕುಂದರ್ ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಎಲ್ಲಾ ಸಂಘ-ಸಂಸ್ಥೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Edited By : Somashekar
Kshetra Samachara

Kshetra Samachara

13/06/2022 01:13 pm

Cinque Terre

24.2 K

Cinque Terre

0

ಸಂಬಂಧಿತ ಸುದ್ದಿ