ಕುಂದಾಪುರ: ಕುಂದಾಪುರ ತಾಲೂಕಿನ ಬೀಜಾಡಿಯ ಸಮುದ್ರ ತೀರದಲ್ಲಿ ಮೈಕ್ರೋ ಪ್ರಾಸ್ಟಿಕ್, ಎಣ್ಣೆ ಜಿಡ್ಡು ತೇಲಿ ಬಂದಿದ್ದು ಸಮುದ್ರದ ನೀರಿನ ಬಣ್ಣ ಬದಲಾಗಿದೆ.ಇದನ್ನು ಮುಟ್ಟಿದರೆ ಕೈಗೆ ಎಣ್ಣೆ ಜಿಡ್ಡು ಅಂಟುತ್ತಿದೆ.ಇದಲ್ಲದೆ ಸಮುದ್ರದ ನೀರಿನಲ್ಲಿ ಎಣ್ಣೆ ಜಿಡ್ಡಿನ ಜೊತೆ ಮೈಕ್ರೋ ಪ್ರಾಸ್ಟಿಕ್ ಕಣಗಳು ಸೇರಿಕೊಂಡಿವೆ.ಇದರಿಂದಾಗಿ ಸಮುದ್ರದ ನೀರು ಸುಟ್ಡ ಎಣ್ಣೆಯ ವಾಸನೆ ಬರುತ್ತಿದ್ದು ,ನೀರು ಮುಟ್ಟಿದರೆ ಕೈ ತುರಿಕೆ ಬರುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಸದ್ಯ ಕಡಲ ತಡಿಯ ಜನರಲ್ಲಿ ಈ ಬಗ್ಗೆ ಆತಂಕ ಹೆಚ್ಚಿದ್ದು ಜಲಚರಗಳಿಗೂ ಸಮಸ್ಯೆ ಬರುವ ಸಾಧ್ಯತೆ ಇದೆಎನ್ನಲಾಗುತ್ತಿದೆ.ತೇಲುವ ಕಪ್ಪು ದ್ರವ ತೀರದುದ್ದಕ್ಕೂ ಹರಡಿರುವುದು ಆತಂಕಕ್ಕೆ ಕಾರಣವಾಗಿದೆ.ಸಮುದ್ರಕ್ಕೆ ಬಿಡಲಾಗುವ ಕ್ರೂಡ್ ಆಯಿಲ್ ಉಂಡೆ(ಟಾರ್ ಬಾಲ್) ಮಾದರಿಯಲ್ಲಿ ಇದು ಕಂಡುಬಂದಿದೆ. ಇದರಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳಿರುವುದು ಗೋಚರಿಸಿದೆ. ಸಮುದ್ರ ತೀರದ ಸ್ವಚ್ಚತೆಗೆ ತೆರಳಿದ ತಂಡದಲ್ಲಿದ್ದ ಒಂದಿಬ್ಬರಿಗೆ ಎಣ್ಣೆ ಅಂಶದ ಟಾರ್ ಚಪ್ಪಲಿಗೆಲ್ಲಾ ಮೆತ್ತಿಕೊಂಡಿದೆ.
ಮೈಕ್ರೋಪ್ಲಾಸ್ಟಿಕ್, ಟಾರ್ ಬಾಲ್ ಜಲಚರ, ಮಾನವನಿಗೆ ಹಾನಿಕಾರ ಎಂಬುದು ಈಗಾಗಲೇ ಸಂಶೋಧನೆ ಯಲ್ಲಿ ದೃಢಪಟ್ಟಿದೆ. ಆದುದರಿಂದ ಸ್ವಚ್ಛತಾ ತಂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಬಳಿಕ ತೀರಕ್ಕೆ ಆಗಮಿಸಿದ ಪ್ರವಾಸಿಗರಿಗೂ ನೀರಿನ ಅಪಾಯದ ಸ್ಥಿತಿಯ ಬಗ್ಗೆ ಎಚ್ಚರಿಕೆಯನ್ನು ತಂಡ ನೀಡಿದೆ.
Kshetra Samachara
24/05/2022 05:03 pm