ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ ಡ್ರೈನೇಜ್ ನೀರು ರಾಜ ಕಾಲುವೆಗೆ: ಸ್ಥಳೀಯಾಡಳಿತದ ವಿರುದ್ಧ ಜನರ ಆಕ್ರೋಶ!

ವಿಶೇಷ ವರದಿ: ರಹೀಂ ಉಜಿರೆ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡೆಂಘಿ ಹಾವಳಿ ಜೋರಾಗಿದೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಡೆಂಘಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತದೆ. ಆದರೆ ನಗರದ ಹಲವೆಡೆಗಳಲ್ಲಿ ಡ್ರೈನೇಜ್ ನೀರನ್ನು ರಾಜಾ ಕಾಲುವೆಗೆ ಬಿಡುವುದು, ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುದು ಕಂಡುಬರುತ್ತಿದ್ದು ಕಾಯಿಲೆ ಹರಡಲು ಕಾರಣವಾಗುತ್ತಿದೆ.

ಇದು ಉದ್ಯಾವರ ಸಮೀಪದ ಕಡೆಕಾರು ಪಂಚಾಯತ್ ವ್ಯಾಪ್ತಿಯ ಬಲಾಯಿಪಾದೆಯ ದೃಶ್ಯ. ಇಲ್ಲಿ ಅಪಾರ್ಟ್‌ಮೆಂಟ್‌ಗಳ ಡ್ರೈನೇಜ್ ನೀರನ್ನು ನೇರವಾಗಿ ರಾಜಾ ಕಾಲುವೆಗೆಬಿಡಲಾಗುತ್ತಿದೆ. ವರ್ಷಗಟ್ಟಳೆ ನಿಂತಿರುವ ಈ ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಊರಲ್ಲಿ ಡೆಂಘಿ, ಮಲೇರಿಯಾ ಹರಡಲು ಕಾರಣವಾಗುತ್ತಿದೆ. ಹಲವು ಸಮಯಗಳಿಂದ ಸ್ಥಳೀಯ ನಿವಾಸಿಗಳು ಪಂಚಾಯತ್ ಮತ್ತು ನಗರಸಭೆಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ.

ನೀವು ನಂಬಲೇಬೇಕು ,ಕಳೆದ ಹತ್ತು ವರ್ಷಗಳಿಂದಲೂ ಇಲ್ಲಿ ಇದೇ ಪರಿಸ್ಥಿತಿ ಇದೆ.ಹೊಟೇಲು‌ ಮತ್ತು‌ ಅಪಾರ್ಟ್ ಮೆಂಟ್ ಗಳ ನೀರು ಹರಿಯಲು ಸೂಕ್ತ ಡ್ರೈನೇಜ್ ವ್ಯವಸ್ಥೆಯನ್ನೇ ಇಲ್ಲಿ‌ ಮಾಡಿಲ್ಲ.ಅಕ್ಕಪಕ್ಕದಲ್ಕಿ ಅಸಾಧ್ಯ ವಾಸನೆ ಮತ್ತು ರೋಗವಾಹಕ ಸೊಳ್ಳೆಗಳು ಹಬ್ಬಿವೆ.ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಇಲ್ಲಿ ಶಿಕ್ಷೆ ಅನುಭವಿಸಬೇಕಾಗಿದೆ.

ಸ್ವಚ್ಛತೆಗೆ ಗಮನ ಕೊಡದೇ ಇದ್ದಲ್ಲಿ ಸ್ಥಳೀಯಾಡಳಿತಗಳು ಮಲೇರಿಯಾ ಮತ್ತು ಡೆಂಘಿ ವಿರುದ್ಧ ಯಾವುದೇ ಅಭಿಯಾನ ಹಮ್ಮಿಕೊಂಡರೂ ಪ್ರಯೋಜನವಿಲ್ಲ.ತಕ್ಷಣ ಕಡೆಕಾರ್ ಪಂಚಾಯತ್ ಮತ್ತು ನಗರಸಭೆ ಇತ್ತ ಕಡೆ ಗಮನ ಹರಿಸಿ ,ಇದಕ್ಕೆ ಕಾರಣರಾದವ ವಿರುದ್ಧ ಸೂಕ್ರ ಕ್ರಮ ಜರುಗಿಸಿ ಸ್ವಚ್ಛತೆಗೆ ವ್ಯವಸ್ಥೆ ಮಾಡಿಕೊಡಬೇಕಿದೆ.

Edited By : Manjunath H D
Kshetra Samachara

Kshetra Samachara

14/05/2022 08:13 pm

Cinque Terre

16.95 K

Cinque Terre

0