ಮುಲ್ಕಿ: ಮುಲ್ಕಿ ಬಿಲ್ಲವ ಸಂಘದ ಬಳಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಸಾಯಿ ದುರ್ಗಾ ಚೈನೀಸ್ ಫಾಸ್ಟ್ ಫುಡ್ ಎಂಬ ಮಿನಿ ಕ್ಯಾಂಟೀನ್ ನ ತ್ಯಾಜ್ಯದಿಂದ ಆಟೋ ನಿಲ್ದಾಣ ಪರಿಸರ ದುರ್ವಾಸನೆ ಬೀರುತ್ತಿದ್ದು ಕೊರೋನಾ ಸಂಕಷ್ಟದ ದಿನಗಳಲ್ಲಿ ದುಬಾರಿ ಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಆಟೋ ಚಾಲಕರು ಮುಲ್ಕಿ ನಗರ ಪಂಚಾಯತ್ ಗೆ ದೂರು ನೀಡಿದ್ದಾರೆ.
ಆಟೋ ಚಾಲಕರ ದೂರಿನ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಾಚರಣೆ ನಡೆಸಿದ ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರಪೂಜಾರಿ, ಸಿಬ್ಬಂದಿ ಪ್ರಕಾಶ್ ಹಾಗೂ ಕಿಶೋರ್ ಮತ್ತಿತರರು ಫಾಸ್ಟ್ ಫುಡ್ ಕ್ಯಾಂಟೀನ್ ಪರಿಸರವನ್ನು ತಪಾಸಣೆ ನಡೆಸಿದ್ದಾರೆ ಹಾಗೂ ಸಮೀಪದ ಅಂಗಡಿಗಳಿಗೂ ತೆರಳಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ.
ಈ ಸಂದರ್ಭ ಮುಖ್ಯಾಧಿಕಾರಿ ಚಂದ್ರಪೂಜಾರಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸ್ವಚ್ಛತೆಯನ್ನು ಉಲ್ಲಂಘಿಸಿದ ಗೂಡಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
Kshetra Samachara
21/08/2021 02:25 pm