ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ: ಬರುವ ಮುನ್ನ ಕರೆ ಮಾಡಿ

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಬೆಡ್‌ ಮತ್ತು ಐಸಿಯು ಬೆಡ್ ಕೊರತೆ ಉಂಟಾಗಿದೆ. ಹೀಗಾಗಿ ರೋಗಿಗಳನ್ನು ಕರೆತರುವ ಮುನ್ನ ಮೊಬೈಲ್‌ (9686692603)ಗೆ ಕರೆ ಮಾಡುವಂತೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್‌ ಶೆಟ್ಟಿ ವಿನಂತಿಸಿದ್ದಾರೆ.

ಬೆಡ್ ಕೊರತೆ ಉಂಟಾಗಿದ್ದು ಕೊರೊನಾ ಕಾರಣದಿಂದ ಅಲ್ಲ. ಬದಲಾಗಿ ವರ್ಷದಲ್ಲಿ ಒಂದೆರಡು ಬಾರಿ ಈ ರೀತಿ ಆಗಿರುತ್ತದೆ. ಕಳೆದ ವರ್ಷವೂ ಈ ರೀತಿ ಆಗಿತ್ತು. ಆದರೆ ಜನರಿಗೆ ತೊಂದರೆ ಆಗದಂತೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಮಾಹಿತಿಗಾಗಿ ಈ ಪ್ರಕಟಣೆ ಹೊರಡಿಸಲಾಗಿದೆ ಎಂದು ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

Kshetra Samachara

Kshetra Samachara

26 days ago

Cinque Terre

7.73 K

Cinque Terre

1

  • mangesha
    mangesha

    OMG