ಮೂಡುಬಿದಿರೆ: ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಉತ್ತಮ ಆರೋಗ್ಯದ ದೃಷ್ಠಿಯಿಂದ ತೆಂಗಿನ ಗೆರಟೆಯಲ್ಲಿಯೇ ಚಹಾ, ನೀರು ಅಥವಾ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು.
ನಂತರ ನಾವು ಅಭಿವೃದ್ಧಿ ಹೊಂದುತ್ತಿದ್ದಂತೆ ಪ್ಲಾಸ್ಟಿಕ್ ಲೋಟ, ಸ್ಟೀಲ್ ಲೋಟ ಮತ್ತು ಪೇಪರ್ ಲೋಟಗಳಿಗೆ ಮಾರು ಹೋದೆವು. ಆದರೆ ಇದೀಗ ಮತ್ತೆ ನಾವು ಹಿಂದಿನ ಕಾಲದ ತೆಂಗಿನಕಾಯಿಯ ಗಿರಟೆಯನ್ನು ಬಳಕೆ ಮಾಡುವಂತೆ ಮೂಡುಬಿದಿರೆ ಜೈನ್ ಪಿಯು ಕಾಲೇಜಿನ ಉಪನ್ಯಾಸಕಿ ಸಂಧ್ಯಾ ಉತ್ತಮ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆಯನ್ನು ಮಾಡುವ ಬದಲು ತೆಂಗಿನ ಚಿಪ್ಪಿನ ಗಿರಟೆಯಲ್ಲಿ ಪಾನಕ, ತಿಂಡಿ, ಚಹಾ ಸೇವಿಸುವಂತೆ ಜನರಲ್ಲಿ ಅದನ್ನು ಮೂಡಿಸಲು ಗಿರಾಟೆಯಲ್ಲಿ ಆಹಾರ ಸೇವನೆ ಅಭಿಯಾನವನ್ನು ನಡೆಸುತ್ತಿದ್ದಾರೆ.
ಮೂಡುಬಿದಿರೆ ಪುರಸಭೆಯು ಹಲವಾರು ರೀತಿಯ ಸರ್ಕಸ್ ಮಾಡುತ್ತಾ ಬಂದಿದೆ. ಆದರೆ ಪ್ಲಾಸಿಕ್ ಹಾಗೂ ಪೇಪರ್ ಲೋಟ, ಪ್ಲೇಟುಗಳ ಬದಲಿಗೆ ಪ್ರಕೃತಿದತ್ತವಾಗಿ ಸಿಗುವ "ಪರಿಸರ ಸ್ನೇಹಿ" ತೆಂಗಿನ ಗೆರಟೆಯನ್ನು ಬಳಸುವ ಟ್ರೆಂಡನ್ನು ಉಪನ್ಯಾಸಕಿ ಸಂಧ್ಯಾ ಪರಿಚಯಿಸುತ್ತಿದ್ದು, ಇದನ್ನು ಸಾರ್ವಜನಿಕ ಗಣೇಶೋತ್ಸವದ ಶೋಭಾಯಾತ್ರೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೆಂಗಿನ ಗೆರಟೆಯಲ್ಲಿಯೇ ಪಾನಕದ ವ್ಯವಸ್ಥೆಯನ್ನು ಕಲ್ಪಿಸುವ ಮುಖೇನ ಜನರಿಂದ ಅಭೂತಪೂರ್ಣ ಸ್ಪಂದನೆ ಪಡೆದುಕೊಂಡಿದ್ದಾರೆ.
ಪ್ರತಿಯೊಂದು ಮನೆಯಲ್ಲೂ ಬಳಕೆಯಾಗುತ್ತಿರುವ ತೆಂಗಿನಕಾಯಿ, ಅದರ ತ್ಯಾಜ್ಯವೆನಿಸುವ 'ಗೆರಟೆಯು ಇಂದು ನಗರಗಳಲ್ಲಿ ದೊಡ್ಡ ಮಟ್ಟದ ತ್ಯಾಜ್ಯವಾಗಿ ಪರಿಣಮಿಸುತ್ತಿದೆ. ಈ ತ್ಯಾಜ್ಯ ಕೇವಲ ತ್ಯಾಜ್ಯವಾಗದಂತೆ ಹೊಸ ರೂಪ ನೀಡಿ ಮತ್ತೆ ಬಳಕೆಯಾಗುವಂತೆ ಮಾಡಬೇಕೆಂಬ ಉದ್ದೇಶದಿಂದ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಪ್ಲಾಸಿಕ್ ಸಹಿತ ಇತರ ತ್ಯಾಜ್ಯಗಳು ರಸ್ತೆ ಬದಿಗಳ ಅಂದವನ್ನು ಕೆಡಿಸುತ್ತಿವೆ. ವಿದ್ಯಾರ್ಥಿಗಳಲ್ಲಿ ಯುವಜನತೆಯಲ್ಲಿ ಶೂನ್ಯ ತ್ಯಾಜ್ಯದ ಬಗ್ಗೆ ಅರಿವು ಮೂಡಿಸುವ ಮಹತ್ತರವಾದ ಕಾರ್ಯವನ್ನು ಮಾಡುತ್ತಾ ಮಾದರಿಯಾಗುತ್ತಿದ್ದಾರೆ.
ಪಬ್ಲಕ್ ನೆಕ್ಸ್ಟ್ ವಿಷೇಶ ವರದಿ ರಂಜಿತಾ ಮೂಡಬಿದಿರೆ
PublicNext
07/09/2022 10:21 pm