ಉಡುಪಿ: ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಿಲ್ಲೆಯ ವಿವಿದೆಡೆ ಪಿ ಎಫ್ ಐ ಮತ್ತು ಎಸ್ ಡಿ ಪಿ ಐ ಸಂಘಟನೆಗೆ ಸೇರಿದ ಹಲವು ಕಚೇರಿಗಳಿಗೆ ಬೀಗ ಹಾಕಿ ಪಿಎಫ್ ಐ ಸಂಘಟನೆಗೆ ಸೇರಿದ ದಾಖಲೆ ಮತ್ತು ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಪಿಎಫ್ ಐ ನ ಯಾವುದೇ ಕಚೇರಿ ಇರಲಿಲ್ಲ, ಬದಲಾಗಿ ಎಸ್ ಡಿ ಪಿ ಐ ಕಚೇರಿಯಲ್ಲೇ ಪಿಎಫ್ ಐ ಕಾರ್ಯಕರ್ತರು ಕಾರ್ಯಾಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಹಲವು ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ.
ಉಡುಪಿಯ ಪಂದುಬೆಟ್ಟು ಮಸೀದಿ ಬಳಿಯ ಕಟ್ಟಡದಲ್ಲಿದ್ದ ಕಚೇರಿ, ಹೂಡೆ, ಗಂಗೊಳ್ಳಿಯ ಎಸ್ ಡಿ ಪಿ ಐ ಕಚೇರಿಗಳಿಗೆ ಬೀಗ ಹಾಕಿದ ಪೊಲೀಸರು,ಎಸ್ ಡಿ ಪಿ ಐ ನಾಯಕರಾದ ಬಶೀರ್ ಮತ್ತು ನಜೀರ್ ಮನೆಗೂ ದಾಳಿ ನಡೆಸಿದ್ದಾರೆ. ಆದರೆ ಈ ನಾಯಕರ ಮನೆಗೆ ಬೇಗ ಹಾಕಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬರಿಗೈಯಲ್ಲಿ ವಾಪಸಾದರು.
Kshetra Samachara
29/09/2022 12:42 pm