ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮತ್ಸ್ಯ ಗ್ರಾಮ ನಿರ್ಮಾಣಕ್ಕೆ ಕ್ರಮ; ಮಟ್ಟಾರು ರತ್ನಾಕರ ಹೆಗ್ಡೆ

ಮಂಗಳೂರು: ನಗರದ ಸಸಿಹಿತ್ಲು, ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರಿಕಾ ಚಟುವಟಿಕೆಗಳಿಗೆ ಸಮಗ್ರ ಅನುಕೂಲತೆಗಳು ಇರುವ ಮತ್ಸ್ಯ ಗ್ರಾಮ ನಿರ್ಮಾಣಕ್ಕೆ ಪೂರ್ವ ಭಾವಿಸಿದ್ದತಾ ಸಭೆಗಳನ್ನು ನಡೆಸಲಾಗಿದೆ.

ಸದ್ಯದಲ್ಲೇ ಸಸಿಹಿತ್ಲು ಗ್ರಾಮದಲ್ಲಿ 5 ಎಕರೆ ಜಾಗ ದೊರಕುವ ಸಾಧ್ಯತೆಯಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ತಿಳಿಸಿದರು.

ನಗರದ ಉರ್ವಸ್ಟೋರ್ ನಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಅನುಷ್ಠಾನ ಕುರಿತು ಹಮ್ಮಿಕೊಂಡ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತ್ಸ್ಯ ಸಂಬಂಧಿತ ಸಮಗ್ರ ಚಟುವಟಿಕೆಗಳ ಅಭಿವೃದ್ಧಿಗಾಗಿ ಈ ಗ್ರಾಮಗಳಲ್ಲಿ ತಾಜಾ ಮೀನುಗಳ ಸಂಗ್ರಹ, ಮೀನು ಮಾರಾಟ, ಒಣಗಿಸುವ ಪ್ರಕ್ರಿಯೆ, ಫುಡ್ ಪಾರ್ಕ್, ಹೋಟೆಲ್, ವಿಶ್ರಾಂತಿ ಹಾಗೂ ಅತಿಥಿ ಗೃಹಗಳ ನಿರ್ಮಾಣ ಸೇರಿದಂತೆ ಸಮಗ್ರವಾಗಿ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳುವ ಗ್ರಾಮವಾಗಿ ಅವುಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ಮತ್ಸ್ಯ ಗ್ರಾಮಕ್ಕೆ 7.5 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ಲಭ್ಯವಾಗಲಿದೆ.‌ ಅದಕ್ಕಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಮಿತಿಯು ರಚನೆಯಾಗಿದೆ ಎಂದು ಹೇಳಿದರು. ಮತ್ಸ್ಯಸಂಪದ ಯೋಜನೆಯಡಿ ಸ್ವಸಹಾಯ ಸಂಘದ ಮಹಿಳೆಯರಿಗೆ ಮೀನು ಮಾರಾಟಕ್ಕೆ ಅನುಕೂಲವಾಗುವಂತೆ ವಾಹನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಾರಂಭದಲ್ಲಿ ಮೂರು ವಾಹನಗಳನ್ನು ನೀಡುವ ಕುರಿತು ಚಿಂತಿಸಲಾಗುತ್ತಿದೆ. ಮೀನಿನ ತ್ಯಾಜ್ಯವನ್ನು ಗೊಬ್ಬರ ಮಾಡಿ ಮಾರಾಟ ಮಾಡಲಾಗುತ್ತದೆ ಹಾಗೂ ಅದರ ತ್ಯಾಜ್ಯದಿಂದ ಅನಿಲ ಉತ್ಪತ್ತಿ ಮಾಡುವ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಬಹಳಷ್ಟು ಕೆಲಸಗಳಾಗುತ್ತಿದ್ದು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಕೋರಿದರು.

Edited By : Abhishek Kamoji
Kshetra Samachara

Kshetra Samachara

26/09/2022 10:16 pm

Cinque Terre

5.64 K

Cinque Terre

0

ಸಂಬಂಧಿತ ಸುದ್ದಿ