ಮಂಗಳೂರು: ನಗರದ ಹೊರವಲಯ ಸುರತ್ಕಲ್ ಜಂಕ್ಷನ್ ನಲ್ಲಿ ಈ ಭಾಗದ ಮನಪಾ ಸದಸ್ಯರು,ಬಿಜೆಪಿ ಮುಖಂಡರು ಹಾಗೂ ಊರಿನ ಗಣ್ಯರು ನೂತನವಾಗಿ ಅಯ್ಕೆಯಾದ ಮೇಯರ್ ಹಾಗೂ ಉಪಮೇಯರ್ ಅವರನ್ನು ಸ್ವಾಗತಿಸಿ ಅಭಿನಂದಿಸಿದರು.
ಬಳಿಕ ಮೆರವಣಿಗೆಯಲ್ಲಿ ಸುರತ್ಕಲ್ ವಲಯ ಕಚೇರಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬರಲಾಯಿತು.ಕಾರ್ಪೊರೇಟರ್ ಹಾಗೂ ಪಾಲಿಕೆ ಅಧಿಕಾರಿಗಳ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಮೇಯರ್ ಜಯಾನಂದ ಅಂಚನ್ ಅವರು ಸುರತ್ಕಲ್ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ನಡೆಸಲಾಗುವುದು.ಸುರತ್ಕಲ್ ಕಚೇರಿಗೆ ಪ್ರತಿ ಬುಧವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಲಾಗುವುದು ಎಂದರು.
ಉಪಮೇಯರ್ ಪೂರ್ಣಿಮಾ ಅವರು ಸುರತ್ಕಲ್ ನಲ್ಲಿ ನೀಡಿದ ಸ್ವಾಗತಕ್ಕೆ ಕೃತಜ್ಞತೆ ವ್ಯಕ್ತ ಪಡಿಸಿ ಮೇಯರ್ ಜತೆ ಗೂಡಿ ಸುರತ್ಕಲ್ ಪರಿಸರದಲ್ಲಿ ಅಭಿವೃದ್ಧಿ ಗೆ ಒತ್ತು ನೀಡಲಾಗುವುದು ಎಂದರು. ಕಾರ್ಪೊರೇಟರ್ ಗಳು ಈ ಸಂದರ್ಭ ಉಪಸ್ಥಿತರಿದ್ದರು.
Kshetra Samachara
14/09/2022 06:18 pm