ಮುಲ್ಕಿ: ಮುಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಕೊಳಚಿಕಂಬಳ ರಸ್ತೆಯ ಒಡೆಯರ ಬೆಟ್ಟು ದುರ್ಗಾ ಬಹು ಮಹಡಿ ಕಟ್ಟಡದ ಬಳಿ ಸೂಕ್ತ ತಡೆಗೋಡೆ ಇಲ್ಲದೆ ಬಾವಿ ಇತ್ತು. ಈ ಅಪಾಯವನ್ನು ಅರಿತ ಪಬ್ಲಿಕ್ ನೆಕ್ಟ್ಸ್ ವರದಿ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಸೂಚನೆ ಮೇರೆಗೆ ಖಾಸಗಿ ಜಾಗದವರನ್ನು ಸ್ಥಳಕ್ಕೆ ಕರೆಯಿಸಿ ಅಪಾಯಕಾರಿ ಬಾವಿಗೆ ತಡೆಗೋಡೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಜಾಗದ ಮಾಲೀಕರು ಬಾವಿಗೆ ತಡೆಗೋಡೆ ನಿರ್ಮಿಸಿದ್ದಾರೆ.
ಅಪಾಯ ಸಂಭವಿಸುವ ಮೊದಲೇ ಸಂಬಂಧಪಟ್ಟವರನ್ನು ಎಚ್ಚರಿಸಿದ ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಹಾಗೂ ಕೂಡಲೇ ಕಾರ್ಯಾಚರಣೆ ನಡೆಸಿದ ಮುಲ್ಕಿ ನ.ಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ರವರಿಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.
Kshetra Samachara
14/09/2022 05:32 pm