ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೋದಿ ಆಗಮನಕ್ಕೆ ರಿಪೇರಿಯಾದ ರಸ್ತೆ ಹತ್ತೇ ದಿನದಲ್ಲಿ ಹಾಳಾಯ್ತು!

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಆಗಮಿಸುವ ಸಂದರ್ಭ ಮಂಗಳೂರು ನಗರಿಯ ರಸ್ತೆಗಳು ಸಂಪೂರ್ಣ ಡಾಮರೀಕರಣಗೊಂಡಿತ್ತು.‌ ಆದರೆ ಅವರು ಬಂದು ಹೋದ ಹತ್ತೇ ದಿನದಲ್ಲಿ ರಸ್ತೆಯಲ್ಲಿ ಹೊಂಡ‌ ಬಾಯ್ಬಿಟ್ಟು ಸರಕಾರ ನಗೆಪಾಟಲಿಗೀಡಾಗಿದೆ. ಈ ಬಗ್ಗೆ ವರದಿಗಳು ಬಿತ್ತರವಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾತ್ರೋ ರಾತ್ರಿ ತೇಪೆ ಹಾಕಿ ಹೊಂಡವನ್ನು ಮುಚ್ಚಿ ಬಿಟ್ಟಿದೆ.

ನಗರದ ಕೂಳೂರಿನ ಸೇತುವೆಯು ಮಳೆಗಾಲದ ಅವಧಿಯಲ್ಲಿ ಸಂಪೂರ್ಣ ಹೊಂಡಗಳಿಂದ ತುಂಬಿ ಹೋಗಿತ್ತು. ಪ್ರತಿದಿನ ಘನ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುವ ಈ ಸೇತುವೆಯ ರಸ್ತೆಯಲ್ಲಿ ನಿತ್ಯವೂ ಜನತೆ ಪಡಬಾರದ ಕಷ್ಟವನ್ನು ಅನುಭವಿಸಿ ಪ್ರಯಾಣ ಮಾಡುತ್ತಿದ್ದರು. ಆದರೆ ಪ್ರಧಾನಿಯವರು ಮಂಗಳೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಕೂಳೂರು ಸೇತುವೆಯ ರಸ್ತೆಗೆ ಮರು ಡಾಮರೀಕರಣ ಮಾಡಲಾಗಿತ್ತು. ಮೋದಿಯವರು ಬಂದ ದೆಸೆಯಿಂದಾದರೂ ರಸ್ತೆ ಸರಿಯ್ತಲ್ಲ ಎಂದು ಜನರು ನಿಟ್ಟುಸಿರು ಬಿಡುತ್ತಿದ್ದಂತೆ ಮೋದಿಯವರು ಬಂದು ಹೋದ ಹತ್ತೇ ದಿನದಲ್ಲಿ ಮತ್ತೆ ಗುಂಡಿ ಬಿದ್ದಿತ್ತು‌.

ರಸ್ತೆಗೆ ಹಾಕಿರುವ ಡಾಮರು ಕಿತ್ತು ಹೋಗಿ ಸೇತುವೆಯ ಕಾಂಕ್ರೀಟ್ ಕಾಣಿಸಿಕೊಳ್ಳುವಷ್ಟು ಬೃಹತ್ ಗುಂಡಿ ನಿರ್ಮಾಣ ಆಗಿತ್ತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಕಳಪೆ ಕಾಮಗಾರಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ತಕ್ಷಣ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ರಾತ್ರೋರಾತ್ರಿ ಸೇತುವೆಯ ಗುಂಡಿಗೆ ತೇಪೆ ಕಾರ್ಯ ಹಾಕಿದೆ. ತೇಪೆ ಹಾಕಿದ ಸ್ಥಳದ ಸ್ವಲ್ಪ ದೂರದಲ್ಲೇ ಮತ್ತೊಂದು ಗುಂಡಿಯೂ ಬಿದ್ದಿದ್ದು, ಮಳೆ ಜಾಸ್ತಿಯಾದರೆ ಅದೂ ಆಳವಾಗುವ ಸಾಧ್ಯತೆಗಳಿವೆ.

Edited By : Manjunath H D
PublicNext

PublicNext

13/09/2022 07:36 pm

Cinque Terre

41.8 K

Cinque Terre

5

ಸಂಬಂಧಿತ ಸುದ್ದಿ