ಮಂಗಳೂರು: ನಗರದ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಗಡುವಿನೊಳಗೆ ತೆರವು ಆಗದಿದ್ದಲ್ಲಿ ನಾಗರಿಕರೇ ಟೋಲ್ ಒಡೆದು ಅರಬ್ಬಿ ಸಮುದ್ರಕ್ಕೆ ಎಸೆಯುವ ಎಚ್ಚರಿಕೆಯನ್ನು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ನೀಡಿದರು.
ನಗರದ ಸುರತ್ಕಲ್ ಎನ್ಐಟಿಕೆಯ ಅಕ್ರಮ ಟೋಲ್ ಗೇಟ್ ತೆರವು ದಿನಾಂಕವನ್ನು ಘೋಷಿಸಲು ಒತ್ತಾಯಿಸುವಂತೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಟೋಲ್ ಗೇಟ್ ಮುಂಭಾಗ ಧರಣಿ ನಡೆಸಿತು. ಈ ಧರಣಿಯು ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆಯವರೆಗೆ ನಡೆಯಲಿದೆ.
ಸುರತ್ಕಲ್ ಎನ್ಐಟಿಕೆ ಟೋಲ್ ತೆರವು ಮಾಡುವ ಅಂತಿಮ ದಿನಾಂಕವನ್ನು ಪ್ರಕಟಣೆ ಮಾಡಿ ಎಂಬುದು ಈ ಧರಣಿಯ ಪ್ರಧಾನವಾದ ಬೇಡಿಕೆ. ದೀಪಾವಳಿ ಹಾಗೂ ದಸರಾ ಹಬ್ಬವನ್ನು ಗಮನಿಸಿ ಅಕ್ಟೋಬರ್ 18ರವರೆಗೆ ಈ ಟೋಲ್ ಗೇಟ್ ಬಂದ್ ಆಗದಿದ್ದಲ್ಲಿ ಟೋಲ್ ಗೇಟ್ ವಿರೋಧಿ ಸಮಿತಿ, ಸಮನ ಮನಸ್ಕ ನಾಗರಿಕರು ಸೇರಿ ಮುತ್ತಿಗೆ ಹಾಕಿ ಜನರೇ ತೆರವು ಗೊಳಿಸುವ ಎಚ್ಚರಿಕೆ ನೀಡಿದರು.
Kshetra Samachara
13/09/2022 05:54 pm