ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಸಚಿವರು ಬರಬೇಕೆಂದು ಕಪ್ಪುಪಟ್ಟಿ ಧರಿಸಿ ಸಾಮಾನ್ಯ ಸಭೆಯಲ್ಲಿ ಕುಳಿತ ವಿಪಕ್ಷ ಸದಸ್ಯರು

ಸುಳ್ಯ: ನಗರದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರಕ್ಕೆ ನಗರ ಪಂಚಾಯತ್ ಸಾಮಾನ್ಯ ಸಭೆಗೆ ಸುಳ್ಯ ಶಾಸಕರು ಹಾಗೂ ಸಚಿವರಾದ ಎಸ್.ಅಂಗಾರ ಅವರು ಬರಬೇಕು ಎಂದು ಒತ್ತಾಯಿಸಿ ನಗರ ಪಂಚಾಯತ್ ವಿಪಕ್ಷ ಸದಸ್ಯರು ಕಪ್ಪು ಪಟ್ಟಿ ಧರಿಸಿ ಸಭೆಯಲ್ಲಿ ಭಾಗವಹಿಸಿದ ಘಟನೆ ನಡೆದಿದೆ. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ನಗರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ, ಕುಡಿಯುವ ನೀರು, ಕಸ ವಿಲೇವಾರಿ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರದ ಚರ್ಚೆ ನಡೆಸಲು, ನಗರ ಪಂಚಾಯತ್‌ಗೆ ಇಂಜಿನಿಯರ್, ಆರೋಗ್ಯಧಿಕಾರಿ ನೇಮಕ, ಮತ್ತಿತರ ವಿಷಯದ ಬಗ್ಗೆ ಚರ್ಚೆ ನಡೆಸಲು ಸಚಿವರು ಸಭೆಗೆ ಆಗಮಿಸಬೇಕು ಎಂದು ವಿಪಕ್ಷ ಸದಸ್ಯ ಕೆ.ಎಸ್.ಉಮ್ಮರ್ ಮನವಿ ಸಲ್ಲಿಸಿದ್ದರು.

ಆದರೆ ಸಭೆಗೆ ಸಚಿವರು ಆಗಮಿಸಿರಲಿಲ್ಲ. ಇದನ್ನು ಪ್ರತಿಭಟಿಸಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಕೆ.ಎಸ್.ಉಮ್ಮರ್ ಕಪ್ಪು ಪಟ್ಟಿ ಧರಿಸಿದರು. ಇವರಿಗೆ ಹಲವು ಮುಖಂಡರು ಸಾಥ್ ನೀಡಿದ್ದಾರೆ.

ಸಚಿವರು ಸಭೆಗೆ ಬರುವ ತನಕ ಪ್ರತಿ ಸಾಮಾನ್ಯ ಸಭೆಗೆ ಕಪ್ಪು ಪಟ್ಟಿ ಧರಿಸಿ ಬರುತ್ತೇನೆ. ಸಚಿವರು ಸಭೆಗೆ ಬಂದ ಮೇಲೆ ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿ, ಕಪ್ಪು ಪಟ್ಟಿ ತೆಗೆಯುತ್ತೇನೆ ಎಂದು ಕೆ.ಎಸ್.ಉಮ್ಮರ್ ಘೋಷಿಸಿದರು. ನಗರದ ಸಮಸ್ಯೆಗಳ ಪರಿಹಾರಕ್ಕೆ ಸಚಿವರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುವುದು ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

08/09/2022 09:17 pm

Cinque Terre

4.33 K

Cinque Terre

0

ಸಂಬಂಧಿತ ಸುದ್ದಿ