ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಕಟಪಾಡಿ-ಶಿರ್ವ ರಸ್ತೆಯಲ್ಲಿ ರಸ್ತೆ ಗುಂಡಿ ಜೊತೆಗೆ ತ್ಯಾಜ್ಯ ಸಮಸ್ಯೆ!

ಕಾಪು: ಉಡುಪಿ ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಕಾಪು ತಾಲೂಕಿನ ಕಟಪಾಡಿ ಶಿರ್ವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕಟಪಾಡಿ ರೈಲ್ವೆ ಸೇತುವೆ ಬಳಿ ರಾಜ್ಯ ಹೆದ್ದಾರಿಯಲ್ಲಿ ಹೊಂಡಗಳು ಬಿದ್ದು ಪರಿಣಾಮ ನಿತ್ಯ ಅಪಘಾತ ಸಂಭವಿಸುತ್ತಿದೆ. ನಿತ್ಯ ಸಾವಿರಾರು ಜನ ಸಂಚರಿಸುವ ರಸ್ತೆ ಮಳೆ ನೀರು ಮತ್ತು ಗುಂಡಿಗಳಿಂದ ತುಂಬಿ ಹೋಗಿದೆ. ಇದೂ ಸಾಲದೆಂಬಂತೆ ಈಗ ತ್ಯಾಜ್ಯ ಸುರಿಯುವಿಕೆ ಇನ್ನೊಂದು ಸಮಸ್ಯೆಯಾಗಿ

ಪರಿಣಮಿಸಿದೆ.

ಹೌದು , ಈ ರಸ್ತೆ ಬದಿಯ ಹೊಂಡಕ್ಕೆ ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ತ್ಯಾಜ್ಯ ರಸ್ತೆ ತುಂಬ ಹರಡಿದ್ದು ಸಾಂಕ್ರಾಮಿಕ ರೋಗವನ್ನು ಆಹ್ವಾನಿಸುತ್ತಿದೆ. ಈ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸಬೇಕು ಮತ್ತು ತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

18/07/2022 05:08 pm

Cinque Terre

6.29 K

Cinque Terre

1

ಸಂಬಂಧಿತ ಸುದ್ದಿ