ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ ತಾಲೂಕಿನ ಕೆರಾಡಿಗೆ ಕೊನೆಗೂ ಬಂತು KSRCT ಬಸ್ !

ಕುಂದಾಪುರ: ಕುಂದಾಪುರ ತಾಲೂಕಿನ ಕೆರಾಡಿ ಗ್ರಾಮಕ್ಕೆ ಸರ್ಕಾರಿ ಬಸ್‌ ಸೌಲಭ್ಯ ಇಲ್ಲದೆ ಬಹಳಷ್ಟು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು.ಮಾತ್ರವಲ್ಲ ಇತ್ತೀಚೆಗೆ ಬಸ್ಸಿಗಾಗಿ ಪ್ರತಿಭಟನೆಯನ್ನೂ ನಡೆಸಿದ್ದರು.ಇದೀಗ ಕೊನೆಗೂ ಬೈಂದೂರು ಶಾಸಕರ ಪ್ರಯತ್ನದಿಂದ ಕೆರಾಡಿ ಭಾಗಕ್ಕೆ ಬಸ್ ಬಂದಿದೆ.ಶಾಸಕರು ಬಸ್ ಓಡಾಟಕ್ಕೆ ಚಾಲನೆ ನೀಡುವ ಮೂಲಕ ಕ್ಷೇತ್ರದ ಜನರ ಬೇಡಿಕೆಯೊಂದನ್ನು ಈಡೇರಿಸಿದ್ದಾರೆ.

ಬಳಿಕ ಮಾತನಾಡಿದ ಅವರು , ಕ್ಷೇತ್ರದ ಗ್ರಾಮೀಣ ಭಾಗಗಳಿಗೆ ಬಸ್ ಸಂಪರ್ಕ ನೀಡುವಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಅಗತ್ಯವಿರುವ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್‌ ಸಂಪರ್ಕ ಕಲ್ಪಿಸುವ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿತ್ತು.

ಎಲ್ಲರೂ ವಿದ್ಯಾವಂತರಾದರೆ ಮಾತ್ರ ಸುವ್ಯವಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂಬ ಪರಿಕಲ್ಪನೆಯಡಿ ಕೆರಾಡಿ ಭಾಗಕ್ಕೆ ಬಸ್‌ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.ಕುಂದಾಪುರದಿಂದ ಕೆರಾಡಿಗೆ ಸಂಚಾರ ಆರಂಭಿಸಿದ ಸಾರಿಗೆ ಬಸ್‌ಗೆ ನೆಂಪುವಿನಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದರು.

Edited By :
Kshetra Samachara

Kshetra Samachara

08/07/2022 07:20 pm

Cinque Terre

21.59 K

Cinque Terre

1

ಸಂಬಂಧಿತ ಸುದ್ದಿ