ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಲಕ್ಷಾಂತರ ರೂ. ಬಿಲ್ ಕಳುಹಿಸಿದ ಮೆಸ್ಕಾಂ: ಸಿಟ್ಟಿಗೆದ್ದ ಗ್ರಾಹಕರು

ಕಾಪು: ಮೆಸ್ಕಾಂ ಇಲಾಖೆ ಪಡುಬಿದ್ರಿ ಗ್ರಾ.ಪಂ.ಸಭಾಂಗಣದಲ್ಲಿ ನಡೆದ ವಿದ್ಯುತ್ ಅದಾಲತ್ ನಲ್ಲಿ, ಗ್ರಾಹಕರಿಗೆ ತಿಂಗಳ ಬಿಲ್ ಲಕ್ಷಾಂತರ ರೂಪಾಯಿ ಕಳುಹಿಸಿರುವ ವಿರುದ್ಧ ಗ್ರಾಹಕರು ಸಿಡಿದೆದ್ದ ಘಟನೆ ನಡೆಯಿತು.. ಈ ಬಿಲ್ ಪಾವತಿಸಲು ಸಾಧ್ಯವಿಲ್ಲ. ನಮಗೆ ಆತ್ಮಹತ್ಯೆ ಮಾಡಿಕೊಳ್ಳುವುದೇ ದಾರಿ ಎಂಬುದಾಗಿ ಅಧಿಕಾರಿಗಳ ಮುಂದೆ ಗುಡುಗಿದ್ದಾರೆ.

ಪಡುಬಿದ್ರಿ ಮೆಸ್ಕಾಂ ಕಚೇರಿ ವ್ಯಾಪ್ತಿಯಲ್ಲಿ ಸುಮಾರು 60 ಮಂದಿ ಗ್ರಾಹಕರಿಗೆ ಇಪ್ಪತ್ತು ಸಾವಿರದಿಂದ ಲಕ್ಷ ರೂಪಾಯಿಗೂ ಅಧಿಕ ಬಿಲ್ ಬಂದಿದೆ. ಈ ಬಗ್ಗೆ ಉಡುಪಿ ವಿಭಾಗದ ಕಾರ್ಯ ಪಾಲಕ ಇಂಜಿನಿಯರ್ ಪ್ರಸನ್ನ ಕುಮಾರ್ ಬಳಿ ದೂರಿದಾಗ, ಅವರು ಸಮರ್ಥಿಸಿ ಮಾತನಾಡಿದ್ದಾರೆ. ಇದು ರೀಡರ್ ಗಳಿಂದ ಆದ ಪ್ರಮಾದ. ಈ ಹಿಂದೆ ರೀಡಿಂಗ್ ಮಾಡಲು ಬಂದ ವ್ಯಕ್ತಿ ಕಡಿಮೆ ಯೂನಿಟ್‌ ಬರೆದಿರುವ ಕಾರಣ ಎಲ್ಲವೂ ಒಟ್ಟಾಗಿ ಬಿಲ್ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದ್ರಿಂದ ಆಕ್ರೋಶಿತರಾದ ಗ್ರಾಹಕರು ನೀವು ನಿಯೋಜನೆ ಮಾಡಿದ ಮೀಟರ್ ರೀಡರ್ ಮಾಡಿದ ತಪ್ಪಿಗೆ ಗ್ರಾಹಕರನ್ನು ಹೊಣೆಗಾರನ್ನಾಗಿಸುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂತಿಮವಾಗಿ ಗ್ರಾಹಕರನ್ನು ಸಮಾದಾನ ಪಡಿಸುವ ನಿಟ್ಟಿನಲ್ಲಿ ಮಾತನಾಡಿದ ಅಧಿಕಾರಿ, ನಮ್ಮ ಮೇಲಾಧಿಕಾರಿಗಳಿಗೆ ಈ ಬಗ್ಗೆ ವರದಿ ಕಳುಹಿಸಿ ಅವರ ನಿರ್ದೇಶನದಂತೆ ವ್ಯವಹಾರ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂತ್ರಸ್ತ ಗ್ರಾಹಕ ರಮೀಜ್, ಗ್ರಾಹಕರಿಗೆ ವಂಚಿಸುತ್ತಿರುವ ಇಲಾಖೆಯ ವಿರುದ್ಧ ನ್ಯಾಯಾಲಯದಲ್ಲಿ ಎಲ್ಲರೂ ಒಂದಾಗಿ ದಾವೆ ಹೂಡುವುದಾಗಿ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

20/06/2022 02:16 pm

Cinque Terre

7.07 K

Cinque Terre

0

ಸಂಬಂಧಿತ ಸುದ್ದಿ