ಮುಲ್ಕಿ: ಮುಲ್ಕಿ ಆಸುಪಾಸಿನ ರೈಲು ಪ್ರಯಾಣಿಕರ ಬಹು ದಿನಗಳ ಕನಸು ನನಸಾಗಿದೆ. ಶನಿವಾರದಿಂದ ಕೊಂಕಣ ರೈಲ್ವೆಯ ಮಂಗಳೂರು-ಮುಂಬೈ ಎಕ್ಸ್ ಪ್ರೆಸ್ (ಸಿ ಎಸ್ ಟಿ) ರೈಲಿಗೆ ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿಸಿದೆ.
ಮುಂಬೈಗೆ ಪ್ರಯಾಣಿಸುವ ರೈಲು ಮುಲ್ಕಿಯಲ್ಲಿ ನಿಲುಗಡೆಯಾಗಿರುವುದಕ್ಕೆ ಮುಲ್ಕಿ ಕಾರು ಚಾಲಕ ಮಾಲೀಕರ ಸಂಘ ಹಾಗೂ ರೈಲ್ವೆ ಆಟೋಚಾಲಕರ ಬಳಗ ತೀವ್ರ ಸಂತಸ ವ್ಯಕ್ತಪಡಿಸಿದೆ. ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಳಿರು-ತೋರಣ ಕಟ್ಟಿ ಸಿಹಿತಿಂಡಿ ವಿತರಿಸಿ ಸೆಲ್ಫಿ ತೆಗೆದು ಸಂಭ್ರಮಿಸಿದರು.
ಈ ಸಂದರ್ಭ ಮುಲ್ಕಿ ಕಾರು ಚಾಲಕರ ಮಾಲೀಕರ ಸಂಘದ ಚಂದ್ರಶೇಖರ್ ರಾವ್ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ಈ ಭಾಗದ ಮುಂಬೈ ರೈಲು ನಿಲುಗಡೆಯ ಬಹುಕಾಲದ ಪ್ರಯಾಣಿಕರ ಬೇಡಿಕೆ ಈಡೇರಿಸಿದ ಕೇಂದ್ರ ರೈಲ್ವೆ ಮಂತ್ರಿ, ಸಂಸದ, ಶಾಸಕರಿಗೂ ಹಾಗೂ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ್ರು..
ಇದರಿಂದಾಗಿ ಕಳೆದ ಹಲವಾರು ವರ್ಷಗಳಿಂದ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ ಮೂಡಬಿದ್ರೆ, ಕಟೀಲು, ಕಾರ್ಕಳ ಬೆಳ್ಮಣ್ಣು, ಕಡೆಯಿಂದ ದೂರದ ಮುಂಬೈ ಕಡೆಗೆ ಹೋಗುವ ಪ್ರಯಾಣಿಕರಿಗೆ ಹಾಗೂ ಮುಂಬೈನಿಂದ ಬರುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
Kshetra Samachara
11/06/2022 08:20 pm