ಮುಲ್ಕಿ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ)ದ ಅಧ್ಯಕ್ಷ ರವಿಶಂಕರ್ ಪಡುಪಣಂಬೂರು ಗ್ರಾಮ ಪಂಚಾಯಿತಿ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ಕಳೆದ ಹಲವಾರು ವರ್ಷಗಳಿಂದ ಅನುದಾನ ಕೊರತೆಯಿಂದ ಕುಂಟುತ್ತಾ ನಡೆಯುತ್ತಿರುವ ಬಾಂದಕೆರೆ ಕಾಮಗಾರಿಯನ್ನು ಪರಿಶೀಲಿಸಿದ ಅವರು ಅಭಿವೃದ್ಧಿಗೆ ಕೂಡಲೇ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಬಳಿಕ ಪಡುಪಣಂಬೂರು ಹೊಯಿಗೆ ಗುಡ್ಡೆ ಬಳಿಯ ಸಾಲೆಕೆರೆಯನ್ನು ಪರಿಶೀಲಿಸಿದರು.
ಈ ಸಂದರ್ಭ ಸ್ಥಳೀಯರು ಸಾಲೆಕೆರೆಯನ್ನು ಮೂಡಾದ ವತಿಯಿಂದ ಅಭಿವೃದ್ಧಿಪಡಿಸಲು ಅಧ್ಯಕ್ಷರನ್ನು ಒತ್ತಾಯಿಸಿದರು. ಕೆರೆಯನ್ನು ಅಭಿವೃದ್ಧಿಪಡಿಸಿದರೆ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವುದಿಲ್ಲ ಎಂದು ಮನವರಿಕೆ ಮಾಡಿದರು. ಇದಕ್ಕೆ ಉತ್ತರಿಸಿದ ಮೂಡ ಅಧ್ಯಕ್ಷರು ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಬಳಿಕ ಪಡುಪಣಂಬೂರು ಪಡುತೋಟ ಹೊಯ್ಗೆಗುಡ್ಡೆ ರಸ್ತೆ ಅಗಲೀಕರಣದ ಮಹಾ ಯೋಜನೆ ಬಗ್ಗೆ ಸ್ಥಳೀಯ ನಾಗರಿಕರ ವಿರೋಧದ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯರ ಹಾಗೂ
ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಜೊತೆ ಮಾತುಕತೆ ನಡೆಸಿ ಪಂಚಾಯತ್ ಮೂಲಕ ನಾಗರಿಕರ ಮನವಿಯನ್ನು ಪರಿಶೀಲಿಸಿ ರಸ್ತೆ ಅಗಲೀಕರಣದ ಮಹಾಯೋಜನೆಯನ್ನು ಮುಂದಿನ ಆರು ತಿಂಗಳ ಒಳಗಡೆ ಪರಿಷ್ಕರಿಸಲಾಗುವುದು ಎಂದರು.
ಈ ಸಂದರ್ಭ ಮಾಜೀ ಪಂಚಾಯತ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಸದಸ್ಯ ಉಮೇಶ್ ಪೂಜಾರಿ, ಮೂಢ ಆಯುಕ್ತ ಡಾ. ಭಾಸ್ಕರ ಎನ್, ಅಧಿಕಾರಿಗಳಾದ ಅಕ್ಬರ್ ಬಾಷಾ, ಪ್ರಕಾಶ್ ಮತ್ತಿತರರು ಇದ್ದರು.
Kshetra Samachara
09/06/2022 03:45 pm