ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:'ಗಾಯದ ಮೇಲೆ ಬರ ಎಳೆದಂತಾಗಿದೆ ಪರಿಸ್ಥಿತಿ; CRZ ಮರಳು ಪರವಾನಿಗೆದಾರರ ಒಕ್ಕೂಟ ಅರೋಪ

ಮಂಗಳೂರು:ರಾಷ್ಟ್ರೀಯ ಹಸಿರು ಪೀಠವು ದಕ್ಷಿಣ ವಲಯ ಚೆನ್ನೈ ವಿಭಾಗದಿಂದ ಉಡುಪಿ ಜಿಲ್ಲೆಯ ಸಿಆರ್ ಝಡ್ ವಲಯದಲ್ಲಿ ಮರಳುಗಾರಿಕೆ ನಿಷೇಧಿಸಿದೆ. ಮೇ 18 ರಂದು ಬಂದ ತೀರ್ಪಿನ ನಂತರ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ತೀರ್ಪಿಗೆ ಸ್ಪಂದಿಸಿದ ಜಿಲ್ಲಾಡಳಿತವು ಬಹುತೇಕ ಆರಂಭಗೊಳ್ಳುವ ಹಂತದಲ್ಲಿದ್ದ CRZ ಮರಳು ತೆರವುಗೊಳಿಸುವಿಕೆಯನ್ನು ಕೂಡಲೇ ನಿಷೇಧಿಸಿದೆ. 9 ತಿಂಗಳ ಹಿಂದೆ ಕಳೆದ ವರ್ಷ 2021 ಸೆಪ್ಟೆಂಬರ್ 17 ರಂದು ಸಿಆರ್ ಝಡ್ ವಲಯದಲ್ಲಿ ಮರಳು ದಿಬ್ಬ ತೆರವುಗೊಳಿಸುವಿಕೆಯು ಸ್ಥಗಿತಗೊಂಡಿತ್ತು.

ಈ ನಡುವೆ ಮರಳು ದಿಬ್ಬ ತೆರವುಗೊಳಿಸಲು ಅತ್ಯಗತ್ಯವಾಗಿ ಬೇಕಾದ ಪರಿಸರ ಇಲಾಖೆಯ ನಿರಾಪೇಕ್ಷಣ ಪತ್ರವು ಬೆಂಗಳೂರಿನಲ್ಲಿ ನಡೆದ KSCZMA ಸಭೆಯಲ್ಲಿ ಮಾರ್ಚ್ 14ರಂದು ದೊರೆತರೂ, ನಮ್ಮ ಜಿಲ್ಲೆಯಲ್ಲಿ ಅಗತ್ಯವಾಗಿ ಬೇಕಾದ ಮರಳು ಸರಬರಾಜು ಆರಂಭಗೊಳಿಸಲು ಬೇಕಾದ ಪಕ್ರಿಯೆಯು ಕಳೆದ ಮೇ ತಿಂಗಳ ಆರಂಭದವರೆಗೂ ನಿಧಾನಗತಿಯಲ್ಲಿ ಸಾಗುತ್ತಾ ಬಂದಿದೆ ಎಂದು

ದಕ್ಷಿಣ ಕನ್ನಡ ಜಿಲ್ಲಾ CRZ ಮರಳು ಪರವಾನಿಗೆದಾರರ ಒಕ್ಕೂಟ ಆರೋಪಿಸಿದೆ.

ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖಂಡರು, ಮರಳು ದಿಬ್ಬ ತೆರವುಗೊಳಿಸುವಿಕೆ ಆರಂಭವಾಗುತ್ತದೆ ಎಂಬ ಸಮಾಧಾನದಿಂದ ಪರವಾನಿಗೆದಾರರು ಬೇಕಾದ ಪೂರ್ವಭಾವಿ ತಯಾರಿ ಮಾಡಿಸಿ, ಮರಳು ದಕ್ಷತೆಯ ಸರ್ವ ಕಾರ್ಯ ಮುಗಿಸಿ, ಜಿಲ್ಲಾಡಳಿತ ನಿಗದಿಪಡಿಸಿದಂತೆ ರೂಪಾಯಿ 10 ಸಾವಿರ ಅರ್ಜಿ ಶುಲ್ಕವನ್ನು ಭರಿಸಿ ಸಂಬಂಧಿಸಿದ ಕಾರ್ಮಿಕರನ್ನು ತರಿಸಿ, ಮುಂಗಡ, ರಾಜ್ಯಧನವನ್ನು ಪಾವತಿಸಿದ ಮೇಲೂ 'ಗಾಯದ ಮೇಲೆ ಬರ ಎಳೆದಂತೆ' ತಮ್ಮ ಕೈಗಳನ್ನು ಸುಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Edited By :
Kshetra Samachara

Kshetra Samachara

08/06/2022 05:09 pm

Cinque Terre

5.41 K

Cinque Terre

0

ಸಂಬಂಧಿತ ಸುದ್ದಿ