ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮಳೆಯ ಅವಾಂತರ ಕೆಸರು ಮಯವಾದ ರಸ್ತೆ

ಮುಲ್ಕಿ: ತಾಲ್ಲೂಕಿನಾದ್ಯಂತ ಮಂಗಳವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮಳೆಗೆ ನಗರ ಪಂಚಾಯತಿಯ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯ ಅಂಗನವಾಡಿ ಹಿಂಭಾಗ ಆವರಣದ ಗೋಡೆ ಕುಸಿದು ಬಿದ್ದಿದೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಮಗು ಆಟವಾಡುತ್ತಿರುವಾಗ ಸಿಮೆಂಟ್ ಪೈಪ್ ಜಾರಿಬಿದ್ದು ಮೃತಪಟ್ಟಿತ್ತು.

ಕೆಎಸ್ ರಾವ್ ನಗರದ ಅಂಬೇಡ್ಕರ್ ಗ್ರಂಥಾಲಯದ ಎದುರಿನ ಭಾಗದಲ್ಲಿ ಮಳೆಗೆ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇನ್ನು ಸ್ಥಳೀಯರಾದ ಆಂಜನೇಯ ಮಾತನಾಡಿ ಆವರಣಗೋಡೆ ಸಮೀಪದಲ್ಲಿ ಮಕ್ಕಳು ಆಟವಾಡುತ್ತಿದ್ದು ರಾತ್ರಿ ಕುಸಿದು ಬಿದ್ದ ಕಾರಣ ಭಾರಿ ಅನಾಹುತ ಒಂದು ತಪ್ಪಿದೆ ಎಂದರು.

ಭಾರಿ ಮಳೆಗೆ ಮುಲ್ಕಿ ತಾಲೂಕು ವ್ಯಾಪ್ತಿಯ ಕುಬೆವೂರು ಶಿಮಂತೂರು ದೇವಸ್ಥಾನ ರಸ್ತೆ, ರೈಲ್ವೆ ನಿಲ್ದಾಣದ ಮೇಲ್ಸೇತುವೆ ಬಳಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೆಸರುಮಯವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಚರಂಡಿ ದುರಸ್ತಿ ಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Edited By :
Kshetra Samachara

Kshetra Samachara

01/06/2022 06:07 pm

Cinque Terre

5.36 K

Cinque Terre

0

ಸಂಬಂಧಿತ ಸುದ್ದಿ