ಮುಲ್ಕಿ: ಮುಲ್ಕಿ ಸಮೀಪದ ಕೊಲ್ಲೂರುಪದವು ಬಳಿ ನಿರ್ಮಾಣಗೊಂಡ ಬಹು ಗ್ರಾಮ ನೀರು ಶುದ್ಧೀಕರಣ ಘಟಕದ ರಸ್ತೆ ಅವ್ಯವಸ್ಥೆಯ ಆಗರವಾಗಿದ್ದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಂಗಳೂರು ವಿಭಾಗದ ಕಿನ್ನಿಗೋಳಿ ಸಹಿತ ಸುಮಾರು 17 ಗ್ರಾಮಗಳಿಗೆ ನೀರುಣಿಸುವ ನೀರು ಶುದ್ದೀಕರಣ ಘಟಕಕ್ಕೆ ಹೋಗುವ ರಸ್ತೆ ಡಾಮರೀಕರಣ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ತೀವ್ರ ಕೆಟ್ಟು ಹೋಗಿದ್ದು ಇಳಿಜಾರು ರಸ್ತೆಯಿಂದ ಬರುವ ಮಳೆ ನೀರಿನೊಂದಿಗೆ ಕಸ, ಕಲ್ಮಶ, ಜಲ್ಲಿ, ಮಣ್ಣು ಬಪ್ಪನಾಡು ಕೊಲ್ಲೂರು ಪದವ್ ಏಳಿಂಜೆ ಮುಖ್ಯ ರಸ್ತೆಯಲ್ಲಿ ಹರಿದು ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಸ್ತೆ ಅವ್ಯವಸ್ಥೆ ಬಗ್ಗೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿಗೊಳಿಸಿ ಇದರ ಜೊತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
29/05/2022 12:02 pm