ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ ಬ್ಯಾರಿಕೇಡ್ ತೆರವು; ಅಪಘಾತಕ್ಕೆ ರಹದಾರಿ!

ಮುಲ್ಕಿ: ಹಲವು ವರ್ಷಗಳಿಂದ ಮುಲ್ಕಿ ರಾ.ಹೆ. 66 ಚತುಷ್ಪಥಗೊಂಡ ಬಳಿಕ ಸೂಕ್ತ ವ್ಯವಸ್ಥೆ ಇಲ್ಲದೆ ಮುಲ್ಕಿ ವಿಜಯ ಸನ್ನಿಧಿ, ಬಪ್ಪನಾಡು ಜಂಕ್ಷನ್, ಮುಲ್ಕಿ ಬಸ್ ನಿಲ್ದಾಣ, ಕಾರ್ನಾಡ್ ಬೈಪಾಸ್, ಕೋಲ್ನಾಡು, ಹಳೆಯಂಗಡಿ, ಪಾವಂಜೆ, ಮುಕ್ಕ ಜಂಕ್ಷನ್ ಗಳಲ್ಲಿ ಒಳರಸ್ತೆಯಿಂದ ಹೆದ್ದಾರಿಗೆ ಬರುವ ವಾಹನಗಳಿಂದ ಅನೇಕ ಅಪಘಾತ ಸಂಭವಿಸಿದ್ದು, ಹಲವರು ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಪೊಲೀಸರು ಹಾಗೂ ದಾನಿಗಳ ನೆರವಿನೊಂದಿಗೆ ಅಪಘಾತ ತಡೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಆದರೆ, ಬುಧವಾರ ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ವರಿಷ್ಠರ ಸೂಚನೆ ಮೇರೆಗೆ ಬ್ಯಾರಿಕೇಡ್ ಗಳನ್ನು ಏಕಾಏಕಿ ತೆರವುಗೊಳಿಸಲಾಗಿದೆ! ಆ ನಂತರ ಇಂದು ಬಪ್ಪನಾಡು ಜಂಕ್ಷನ್ ಹಾಗೂ ಪಾವಂಜೆಯಲ್ಲಿ ಅಪಘಾತಗಳು ನಡೆದಿದೆ.

ಮಳೆಗಾಲವೂ ಸಮೀಪಿಸುತ್ತಿದ್ದು, ಹೆದ್ದಾರಿಯಲ್ಲಿ ಅತಿವೇಗದಿಂದ ಸಾಗುವ ವಾಹನಗಳಿಂದ ಮತ್ತಷ್ಟು ಅಪಘಾತ ಭೀತಿ ಸಣ್ಣಪುಟ್ಟ ವಾಹನಗಳಿಗೆ, ಪಾದಚಾರಿಗಳಿಗೆ ಎದುರಾಗಿದ್ದು ಕೂಡಲೇ ಬ್ಯಾರಿಕೇಡ್ ಅಳವಡಿಸುವಂತೆ ಹಳೆಯಂಗಡಿ ಗ್ರಾಪಂ ಸದಸ್ಯ ಧನರಾಜ್ ಸಸಿಹಿತ್ಲು ಒತ್ತಾಯಿಸಿದ್ದಾರೆ.

Edited By :
Kshetra Samachara

Kshetra Samachara

26/05/2022 08:46 am

Cinque Terre

6.47 K

Cinque Terre

0

ಸಂಬಂಧಿತ ಸುದ್ದಿ