ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ವಾಲ್ಪಾಡಿ ದ್ವಿತೀಯ ಹಂತದ ಗ್ರಾಮ ಸಭೆ-ವಿವಿಧ ಇಲಾಖಾಧಿಕಾರಿಗಳಿಂದ ಸೌಲಭ್ಯ-ಸವಲತ್ತುಗಳ ಬಗ್ಗೆ ಮಾರ್ಗದರ್ಶನ

ಮೂಡುಬಿದಿರೆ: ವಿಧವಾ, ವೃದ್ದಾಪ್ಯ ವೇತನ ಮತ್ತು ಇತರ ಪಿಂಚಣಿ ಯೋಜನೆಯಡಿ ನೀಡಲಾಗುತ್ತಿರುವ ಮೊತ್ತದ ಪ್ರಮಾಣ ರೂ. 600 ರಿಂದ ಏರಿಕೆಯಾಗಿದೆ. ಕಾರಣಾಂತರಗಳಿಂದ ಹಳೆಯ ಮೊತ್ತವೇ ಪಾವತಿ ಆಗುತ್ತಿದ್ದಲ್ಲಿ ಈ ವ್ಯತ್ಯಾಸ ವನ್ನು ಸರಿಪಡಿಸಲು ಫಲಾನುಭವಿಗಳು ತಕ್ಷಣವೇ ತಮ್ಮ ಪಡಿತರ ಮತ್ತು ಆಧಾರ್ ಕಾರ್ಡ್ ಸಹಿತ ಗ್ರಾಮ ಕರಣಿಕರನ್ನು ಭೇಟಿಯಾಗಿ ಅರ್ಜಿ ಸಲ್ಲಿಸುವಂತೆ ವಾಲ್ಪಾಡಿ ಗ್ರಾಮ

ಲೆಕ್ಕಿಗರಾದ ನಿಶ್ಮಿತಾ ತಿಳಿಸಿದರು.

ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಬಳಿಯ ಸಭಾಂಗಣದಲ್ಲಿ ಬುಧವಾರ ಗ್ರಾಮ ಪಂಚಾಯತ್ ಅಧ್ಯಕ್ಷ‌ ಪ್ರದೀಪ್ ಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಅವರು ಮಾಹಿತಿ ಈ ಕುರಿತು ನೀಡಿದರು. ವಿಚ್ಛೇದಿತರು , ಪತಿಯಿಂದ ಬೇರ್ಪಟ್ಟವರು ಮನಸ್ವಿನಿ ಯೋಜನೆಯಡಿ, ಮಂಗಳಮುಖಿಯರು ಮೈತ್ರಿ ಯೋಜನೆ ಅಡಿ ಪಿಂಚಣಿ ಪಡೆಯಲು ಅವಕಾಶವಿದೆ ಎಂದರು.

ಅದೇ ರೀತಿ ಬಿಪಿಎಲ್ ಕಾರ್ಡ್‌ನ 60 ವರ್ಷದೊಳಗಿನವರು ನಿಧನ ಹೊಂದಿದಾಗ ಏಕಗಂಟಿನ ಪರಿಹಾರಧನ, ಪ್ರಾಕೃತಿಕ ವಿಕೋಪದಿಂದಾಗುವ ನಷ್ಟಕ್ಕೆ ಪರಿಹಾರ ಧನ ಪಡೆಯಲು ಇರುವ ಅವಕಾಶಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ನೋಡಲ್ ಅಧಿಕಾರಿಯಾಗಿ ಸಭೆ ನಡೆಸಿಕೊಟ್ಟರು.

ಉಪವಲಯ ಅರಣ್ಯ ಅಧಿಕಾರಿ ಕಾವ್ಯಾ ಆರ್‌. ಗ್ರಾಮಸ್ಥರು ಇಲಾಖೆಯಿಂದ ಬಹುಬಗೆಯ ಗಿಡಗಳನ್ನು ಪಡೆದು ಬೆಳೆಸಲು ಇರುವ ಯೋಜನೆ , ಪ.ಜಾ, ಪ.ಪಂ. ವರ್ಗದವರು ಸಬ್ಸಿಡಿಯಲ್ಲಿ ಅಡುಗೆ ಅನಿಲ ಪಡೆಯಲು ಇರುವ ಯೋಜನೆ ಬಗ್ಗೆ ವಿವರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶುಭಾ, ಕೃಷಿ ಇಲಾಖೆಯ ಸಂಜು ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.

Edited By :
Kshetra Samachara

Kshetra Samachara

25/05/2022 08:44 pm

Cinque Terre

5.24 K

Cinque Terre

0

ಸಂಬಂಧಿತ ಸುದ್ದಿ