ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಗ್ಯಾಸ್ ಗೆ "ಸಾವಿರದ ಸಂಭ್ರಮ" ಅಣಕು ಪ್ರತಿಭಟನೆ!

ಉಡುಪಿ: ಅಡುಗೆ ಸಿಲಿಂಡರ್ ದರ ಸಾವಿರ ತಲುಪಿದೆ.ವಿರೋಧ ಪಕ್ಷಗಳು ಜನರ ದನಿಯಾಗಿ ಪ್ರತಿಭಟನೆ ಮಾಡದೇ ಕುಳಿತಿವೆ.ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಜಿಲ್ಲಾ ನಾಗರೀಕ ಸಮಿತಿಯಿಂದ ವಿಭಿನ್ನ "ಸಾವಿರದ ಸಂಭ್ರಮ" ಅಣಕು ಪ್ರತಿಭಟನೆ ನಡೆಯಿತು.ನಗರದ ಬೀಡಿನಗುಡ್ಡೆ ಮೈದಾನದಲ್ಲಿ ಗ್ಯಾಸ್ ಸಿಲಿಂಡರ್ ಇಟ್ಟು ಅದರ ಸುತ್ತಲೂ ವೃತ್ತಾಕಾರದಲ್ಲಿ ಬೆಂಕಿ ಹೊತ್ತಿಸಲಾಯಿತು.

ಅದರ ಮಧ್ಯೆ ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು ನಿಂತು ,ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ.ಗ್ಯಾಸ್ ದರ ಸಾವಿರ ದಾಟಿದೆ.ಇದರಿಂದ ಜನರಿಗೆ ಖುಷಿ ಇಲ್ಲ ,ಜನ ಇದೇ ರೀತಿ ಬೆಲೆ ಏರಿಕೆ ಬಿಸಿಯಿಂದ ಹೈರಾಣಾಗಿದ್ದಾರೆ.ಆದರೆ ಆಳುವವರಿಗೆ ಇದು ಸಂಭ್ರಮ.ವಿರೋಧ ಪಕ್ಷಗಳು ಕೂಡ ಸುಮ್ಮನೆ ಕುಳಿತಿವೆ.ಹೀಗಾಗಿ ನಾಗರೀಕ ಸಮಿತಿ ಜನರ ಪರವಾಗಿ ಸರಕಾರದ ಗಮನ ಸೆಳೆಯಲು ಈ ಪ್ರತಿಭಟನೆ ಹಮ್ಮಿಕೊಂಡಿದೆ. ಸರಕಾರ ತಕ್ಷಣ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

Edited By :
Kshetra Samachara

Kshetra Samachara

10/05/2022 07:21 pm

Cinque Terre

7.89 K

Cinque Terre

5

ಸಂಬಂಧಿತ ಸುದ್ದಿ