ಉಡುಪಿ: ಉಡುಪಿ ನಗರದಲ್ಲಿ ನಗರಸಭೆ ಕಾರ್ಯಾಚರಣೆ ನಡೆಸಿ ಎಸ್ ಡಿಪಿಐ ಜಿಲ್ಲಾಧ್ಯಕ್ಷರು ನಡೆಸುತ್ತಿದ್ದ ಅನಧಿಕೃತ ಹೊಟೇಲ್ ನ್ನು ತೆರವುಗೊಳಿಸಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಉಡುಪಿ ನಗರಸಭೆ ಪೌರಾಯುಕ್ತ ಉದಯಕುಮಾರ್ ಶೆಟ್ಟಿ , ಇದೊಂದು ಅನಧಿಕೃತ ಕಟ್ಟಡ. ಯಾವುದೇ ಪರವಾನಿಗೆಯನ್ನು ತೆಗೆದುಕೊಂಡಿಲ್ಲ. ಹಾಗಾಘಿ ಕಟ್ಟಡವನ್ನು ತೆರವುಗೊಳಿಸಲು 2018 ರಲ್ಲೇ ಆರ್ಡರ್ ಆಗಿತ್ತು. ಆದರೆ ಕೋಟ್ ನಿಂದ ಸ್ಟೇ ಆರ್ಡರ್ ಇತ್ತು.ಈಗ ಸ್ಟೇ ವೆಕೇಟ್ ಆಗಿದೆ ಎಂದು ಹೇಳಿದ್ದಾರೆ.
ನಗರ ಸಭೆಯಿಂದ ತೆರವುಗೊಳಿಸಲು ಬಂದಾಗ ಕಟ್ಟಡದ ಮಾಲೀಕರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಪರವಾನಿಗೆ ಇರುವ ಯಾವ ಅಂಗಡಿಗಳೂ ಇಲ್ಲ. ಉಡುಪಿಯಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ಲೈಸನ್ಸ್ ಇಲ್ಲದೆ ಕಟ್ಟಿರುವ ಏಕೈಕ ಕಟ್ಟಡ ಇದಾಗಿದೆ.
ಅವರು ನಗರಸಭೆಗೆ ಆದಾಯ ತೆರಿಗೆ ಕಟ್ಟುತ್ತಿಲ್ಲ. ಬೇರೆ ಕಟ್ಟಡಗಳಿಗೆ ಇದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಸದ್ಯ ಈ ಹೊಟೇಲ್ ತೆರವುಗೊಳಿಸಲು ನಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಡಪಡಿಸಿದ್ದಾರೆ.
Kshetra Samachara
26/03/2022 02:42 pm