ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪಣಂಬೂರು:ವಸತಿ ಯೋಜನೆಯಡಿ ಅರ್ಹ ಫಲಾನುಭವಿ ಆಯ್ಕೆಯ ವಿಶೇಷ ಗ್ರಾಮ ಸಭೆ

ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯಿತಿಯಲ್ಲಿ 2021 22ನೇ ಸಾಲಿಗೆ ವಿವಿಧ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಕುರಿತು ವಿಶೇಷ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷರು ವಹಿಸಿದ್ದರು.

ಪಂಚಾಯತ್ ಪಿಡಿಒ ರಮೇಶ್ ನಾಯ್ಕ ಮಾತನಾಡಿ ಪಂಚಾಯತಿ ವ್ಯಾಪ್ತಿಯಲ್ಲಿ ಡಾ.ಅಂಬೇಡ್ಕರ್ ವಸತಿ ಯೋಜನೆಯಡಿ ಫಲಾನುಭವಿಗಳಿಗೆ 10ಮನೆ,ಬಸವ ಯೋಜನೆ ಯಡಿ ಅಲ್ಪಸಂಖ್ಯಾತರಿಗೆ 4, ಸಾಮಾನ್ಯ ವರ್ಗದವರಿಗೆ 26 ಮನೆ ಸೇರಿದಂತೆ ಒಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಫಲಾನುಭವಿಗಳಿಗೆ 40 ಮನೆಗಳಿಗೆ ಅವಕಾಶವಿದ್ದು 15 ಮನೆಗಳಿಗೆ ಈಗಾಗಲೇ ಅರ್ಜಿ ಬಂದಿದೆ. ಕಳೆದ ವರ್ಷದ 15 ಮನೆಗಳು ಸೇರಿದಂತೆ ಒಟ್ಟು 30 ಮನೆಗಳ ಅರ್ಜಿ ದಾಖಲಾಗಿದ್ದು 10 ಮನೆಗಳಿಗೆ ಅರ್ಜಿ ಬಾಕಿ ಇದ್ದು ಅರ್ಜಿ ಸಲ್ಲಿಸಬಹುದು ಎಂದರು.ಈ ಸಂದರ್ಭ ಪಂಚಾಯತ್ ಸದಸ್ಯ ಮೋಹನ್ದಾಸ್ ಮಾತನಾಡಿ ಕಳೆದ ವರ್ಷಗಳ ಹಿಂದೆ ಪಂಚಾಯತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಡಿ ನಿರ್ಮಿಸಿದ ಮನೆಗಳಿಗೆ ಇದುವರೆಗೂ ಹಣ ಮಂಜೂರಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು

ಉಪಾಧ್ಯಕ್ಷರಾದ ಕುಸುಮ ಚಂದ್ರಶೇಖರ್, ಕಾರ್ಯದರ್ಶಿ ಲೋಕನಾಥ ಭಂಡಾರಿ, ಪಂಚಾಯತ್ ಸದಸ್ಯರಾದ ಉಮೇಶ್ ಪೂಜಾರಿ, ದಿನೇಶ್ ಹೊಸಲಕ್ಕೆ, ಹೇಮನಾಥ ತೋಕೂರು ಮತ್ತಿತರರು ಮಾತನಾಡಿದರು.

Edited By : Manjunath H D
Kshetra Samachara

Kshetra Samachara

19/01/2022 02:00 pm

Cinque Terre

4.22 K

Cinque Terre

0

ಸಂಬಂಧಿತ ಸುದ್ದಿ