ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಇನ್ನಂಜೆ ರೈಲ್ವೆ ನಿಲ್ದಾಣ ಗ್ರಾಮಸ್ಥರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ!

ವರದಿ: ರಹೀಂ ಉಜಿರೆ

ಇನ್ನಂಜೆ: ಕ‌ಟಪಾಡಿ – ಇನ್ನಂಜೆ – ಶಿರ್ವ ಭಾಗದ ಜನರ ಬಹುಕಾಲದ ಕನಸೇನೋ ಈಡೇರಿದೆ.11.50 ಕೋಟಿ ರೂ. ವೆಚ್ಚದಲ್ಲಿ ಇನ್ನಂಜೆಯಲ್ಲಿ ರೈಲು ನಿಲ್ದಾಣ ಪುನರ್‌ ನಿರ್ಮಾಣಗೊಂಡಿದೆ. ಆದರೆ ಈ ನಿಲ್ದಾಣವೀಗ ಊಟಕ್ಕಿಲ್ಲದ ಉಪ್ಪಿನಕಾಯಿ! ಯಾಕೆ ಅಂತೀರಾ? ಈ ಸ್ಟೋರಿ ನೋಡಿ....

ಉಡುಪಿ ಜಿಲ್ಲೆಯ ಇನ್ನಂಜೆಯ ರೈಲು ನಿಲ್ದಾಣದ ದೃಶ್ಯ ಇದು.ಬಹುತೇಕ ಎಲ್ಲ ವ್ಯವಸ್ಥೆ ಇರುವ ಸುಸಜ್ಜಿತ ರೈಲು ನಿಲ್ದಾಣವಿದು. ಆದರೆ ಸರಕಾರ ಕೋಟ್ಯಂತರ ರೂ ವ್ಯಯಿಸಿದರೂ ಈ ಭಾಗದ ಜನರ ಪ್ರಮುಖ ಬೇಡಿಕೆಯೇ ಇನ್ನೂ ಈಡೇರಲೇ ಇಲ್ಲ.ಮುಖ್ಯವಾಗಿ ಮುಂಬೈ ,ಬೆಂಗಳೂರು ಗೋವಾದಂತಹ ಪ್ರಮುಖ ಊರುಗಳಿಂದ ಬರುವ ಮತ್ತು ಹೋಗುವ ರೈಲುಗಳೇ ಇಲ್ಲಿ ನಿಲ್ಲುತ್ತಿಲ್ಲ! ಹೀಗಾಗಿ ಈ ನಿಲ್ದಾಣದ ಸ್ಥಿತಿ ಊರವರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತಾಗಿದೆ.

ಈ ನಿಲ್ದಾಣದಿಂದ ಇನ್ನಂಜೆ- ಪಾಂಗಾಳ, ಶಂಕರಪುರ, ಸುಭಾಸ್‌ನಗರ, ಕುರ್ಕಾಲು, ಕುಂಜಾರುಗಿರಿ, ಕಟಪಾಡಿ, ಮಟ್ಟು, ಶಿರ್ವ, ಪಾದೂರು, ಹೇರೂರು, ಬಂಟಕಲ್ಲು, ಉಳಿಯಾರಗೋಳಿ, ಕಾಪು ಸಹಿತ ವಿವಿಧ ಗ್ರಾಮಗಳ ಜನರಿಗೆ ಅನುಕೂಲ ಇದೆ.ಈ ಭಾಗದ ಜನ ಬೆಂಗಳೂರು ,ಮುಂಬೈ ,ಗೋವಾದಂತಹ ಊರುಗಳಲ್ಲಿ ಉದ್ಯೋಗ ,ಉದ್ಯಮ ನಡೆಸುತ್ತಿದ್ದಾರೆ.ಆದರೇನು ಉಪಯೋಗ? ಇವರೀಗ ಪಡುಬಿದ್ರೆ ಅಥವಾ ಉಡುಪಿ ನಿಲ್ದಾಣದಲ್ಲೆ ರೈಲು ಹಿಡಿಯಬೇಕಿದೆ.ಅಥವಾ ಅಲ್ಲಿ ಇಳಿದು ಊರಿಗೆ ಬರಬೇಕಿದೆ.

ಸರಕಾರ ಕೋಟ್ಯಂತರ ರೂ ಖರ್ಚು ಮಾಡಿ ಸ್ಥಳೀಯ ಜನರ ಬೇಡಿಕೆಯನ್ನೇ ಕಡೆಗಣಿಸಿದ್ದು ವಿಪರ್ಯಾಸ.ಜನಪ್ರತಿನಿಧಿಗಳು ಇನ್ನಾದರೂ ಇಚ್ಛಾಶಕ್ತಿ ಪ್ರದರ್ಶಿಸಿ ಇಲ್ಲಿ ಪ್ರಮುಖ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕಿದೆ.

Edited By : Nagesh Gaonkar
Kshetra Samachara

Kshetra Samachara

14/12/2021 05:50 pm

Cinque Terre

8.54 K

Cinque Terre

2

ಸಂಬಂಧಿತ ಸುದ್ದಿ