ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪೇಜಾವರ ಶ್ರೀಗಳ 90ನೇ ಜನ್ಮವರ್ಧಂತಿ- ವಿದ್ಯಾರ್ಥಿನಿ ನಿಲಯಕ್ಕೆ ರಾಜ್ಯ ಸರ್ಕಾರದಿಂದ 4.50 ಕೋಟಿ ರೂ.

ಉಡುಪಿ: ಪೇಜಾವರ ಮಠಾಧೀಶರಾಗಿ ತಮ್ಮ ತಪಸ್ಸು ಹಾಗೂ ಬಹುಮುಖಿ ರಾಷ್ಟ್ರಕಾರ್ಯಗಳಿಂದ ಪ್ರಸಿದ್ಧಿ ಪಡೆದಿದ್ದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ 90ನೇ ಜನ್ಮವರ್ಧಂತಿ ಸ್ಮರಣಾರ್ಥ ಉಡುಪಿಯಲ್ಲಿ ನಿರ್ಮಾಣವಾಗುವ ಹಿಂದುಳಿದ ವರ್ಗಗಳ ಉಚಿತ ವಿದ್ಯಾರ್ಥಿನಿ ನಿಲಯಕ್ಕೆ ರಾಜ್ಯ ಸರ್ಕಾರವು 4.50 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ವಿಶೇಷ ಮುತುವರ್ಜಿಯಿಂದ ಈ ಅನುದಾನ ಮಂಜೂರಾಗಿದೆ. ಈಗಾಗಲೇ ಶ್ರೀ ವಿಶ್ವೇಶತೀರ್ಥರು ಉಡುಪಿ ಕುಕ್ಕಿಕಟ್ಟೆ ಸಮೀಪ ಶ್ರೀ ಮಠದ ಭೂಮಿಯಲ್ಲಿ ಒಂದು ಉಚಿತ ವಿದ್ಯಾರ್ಥಿನಿ ನಿಲಯವನ್ನು ತಮ್ಮ ನಾಲ್ಕನೇ ಪರ್ಯಾಯದ ಅವಧಿಯಲ್ಲಿ 2000ನೇ ಇಸವಿಯಲ್ಲಿ ಸ್ಥಾಪಿಸಿದ್ದು, ಅದನ್ನು ಅಂದಿನ‌ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರು ಉದ್ಘಾಟಿಸಿದ್ದರು. ಅದು ಈಗ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ.

ಈ ವಿದ್ಯಾರ್ಥಿನಿ ನಿಲಯಕ್ಕೆ ಬೇಡಿಕೆ ಹೆಚ್ಚಿತ್ತು. ಅದೇ ವೇಳೆ ಶ್ರೀಗಳವರ 90 ನೇ ಜನ್ಮವರ್ಧಂತಿಗೆ ಸಮಾಜಕ್ಕೆ ಉಪಯೋಗವಾಗುವ ಒಂದು ಯೋಜನೆ ಅನುಷ್ಠಾನ ಗೊಳಿಸಬೇಕೆಂದು ಶ್ರೀಪಾದರ ವಿಶೇಷ ಭಕ್ತರೂ ಅಭಿಮಾನಿಗಳೂ ಆಗಿದ್ದ ಉದ್ಯಮಿಗಳಾದ ಡಾ ಜಿ. ಶಂಕರ್ ಮತ್ತು ಭುವನೇಂದ್ರ ಕಿದಿಯೂರು ಮೊದಲಾದವರು 2019 ರಲ್ಲಿ ಶ್ರೀಗಳು ಕಾಲವಾಗುವ ಮೊದಲೇ ಸಂಕಲ್ಪಿಸಿದ್ದರು. ಅದರಂತೆ ಈ ವಿದ್ಯಾರ್ಥಿನಿ ನಿಲಯಕ್ಕೆ ಹೆಚ್ಚುವರಿಯಾಗಿ ಒಂದು ವಿದ್ಯಾರ್ಥಿನಿ ನಿಲಯವನ್ನು ನಿರ್ಮಿಸಲು ಯೋಜಿಸಲಾಗಿತ್ತು . ಆದರೆ ಆ ವೇಳೆಗಾಗಲೇ ಶ್ರೀಪಾದರು ಹರಿಪಾದ ಸೇರಿದ್ದರು.

ಈ ಯೋಜನೆಯ ಬಗ್ಗೆ ಆರ್ಥಿಕ ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು.‌ ಇದೀಗ ಕೋಟ ಶ್ರೀನಿವಾಸ ಪೂಜಾರಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ವಿಷಯ ಮಂಡಿಸಿ ತಮ್ಮ ಇಲಾಖೆಯ ಮೂಲಕ ಅನುದಾನ ಮಂಜೂರು ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

20/10/2021 11:30 am

Cinque Terre

7.09 K

Cinque Terre

1

ಸಂಬಂಧಿತ ಸುದ್ದಿ