ಉಡುಪಿ: ಕೊರೊನಾ ವೈರಸ್ ದಾಳಿಗೆ ಅದೆಷ್ಟೋ ಕಂಪನಿಗಳು, ಉದ್ಯಮಗಳು ಸ್ಥಗಿತಗೊಂಡಿವೆ. ಕೊರೊನಾ ಕರಿನೆರಳು ಮಂಗಳೂರು-ಮಣಿಪಾಲ ಎಸಿ ವೋಲ್ವೊ ಬಸ್ ಸಂಚಾರಕ್ಕೂ ಕಂಟಕವಾಗಿದೆ.
ಹೌದು. ಸುಮಾರು 11 ವರ್ಷಗಳ ಹಿಂದೆ ಮಂಗಳೂರು – ಮಣಿಪಾಲ ನಡುವೆ, ಬಳಿಕ ಭಟ್ಕಳ- ಮಂಗಳೂರು, ಮಣಿಪಾಲ- ಕಾಸರಗೋಡು ನಡುವೆ ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ವೋಲ್ವೊ ಬಸ್ ಆರಂಭಗೊಂಡಿದ್ದವು. ಆದರೆ 2020ರ ಕೊರೊನಾದ ಮೊದಲ ಅಲೆಯ ವೇಳೆ ಮತ್ತು 2021ರ 2ನೇ ಅಲೆಯ ವೇಳೆ ನಿಲುಗಡೆಗೊಂಡ ಮಂಗಳೂರು-ಮಣಿಪಾಲ ಎಸಿ ವೋಲ್ವೊ ಇನ್ನು ಸಂಚರಿಸುವುದು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.
2010ರ ಮಾರ್ಚ್ 27ರಂದು ಮಂಗಳೂರು ಮತ್ತು ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೃಷ್ಣ ಪಾಲೆಮಾರ್ ಮತ್ತು ಡಾ| ವಿ.ಎಸ್. ಆಚಾರ್ಯ ಅವರು ವೋಲ್ವೊ ಬಸ್ ಸಂಚಾರವನ್ನು ಉದ್ಘಾಟಿಸಿದ್ದರು.
ಮಣಿಪಾಲ – ಮಂಗಳೂರು ನಡುವೆ ಓಡಿದ 10 ಬಸ್‌ಗಳು ಡಿಪೋದಲ್ಲಿದ್ದು, ಅವುಗಳನ್ನು ಸ್ಕ್ರ್ಯಾಪ್‌ಗೆ ಹಾಕಲು ಅನುಮತಿ ಸಿಕ್ಕಿದೆ ಎನ್ನಲಾಗುತ್ತಿದೆ. ಹಳೆಯ ಬಸ್‌ಗಳು ಸ್ಟಾಪ್ ಆದರೆ ಹೊಸ ಬಸ್‌ಗಳನ್ನು ಖರೀದಿಸಿ ಬಸ್ ಓಡಿಸುವುದೂ ಕಷ್ಟ. ಎರಡು ವರ್ಷ ಕೊರೊನಾ ಸೋಂಕು ನೀಡಿದ ಆರ್ಥಿಕ ಹೊಡೆತದಿಂದಾಗಿ ಹೊಸ ಸಿಟಿ ವೋಲ್ವೊ ಬಸ್ ಖರೀದಿ ಅಸಂಭವ ಎನ್ನಲಾಗುತ್ತಿದೆ. ಇನ್ನೇನಾ ದರೂ ಭವಿಷ್ಯದಲ್ಲಿ ಆಶಾವಾದ ಮೂಡಿಸುವುದಿದ್ದರೆ ರಾಜ್ಯದ ರಾಜಧಾನಿಯಲ್ಲಿ ಸದ್ದು ಮಾಡಿದ ಎಲೆಕ್ಟ್ರಿಕ್ ಬಸ್‌ಗಳು ಮಾತ್ರ.
Kshetra Samachara
25/09/2021 09:02 pm