ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ರದ್ದು?

ಮಂಗಳೂರು: ಮಂಗಳೂರು-ಉಡುಪಿ ಹೆದ್ದಾರಿ ಮಧ್ಯೆ ಬರುವ ಸುರತ್ಕಲ್ ಟೋಲ್ ಗೇಟ್‌ ರದ್ದುಪಡಿಸುವ ಬಗ್ಗೆ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌ಎಐ) ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ವಿರುದ್ಧದ ಕ್ರಿಯಾ ಸಮಿತಿ ಇತ್ತೀಚೆಗೆ ಟೋಲ್ ಗೇಟ್‌‌ನಲ್ಲಿ ಫಾಸ್ಟ್ಯಾಗ್ ಪರಿಚಯಿಸುವುದನ್ನು ವಿರೋಧಿಸಿತ್ತು. ಇದನ್ನು 'ಕಾನೂನುಬಾಹಿರ' ಎಂದು ಕರೆದಿದೆ. "ಎನ್‌ಎಚ್‌ಎಐ ಆರಂಭದಲ್ಲಿ ತಾತ್ಕಾಲಿಕವಾಗಿ ಸುರತ್ಕಲ್ ಟೋಲ್ ಗೇಟ್ ಸ್ಥಾಪಿಸಲು ನಿರ್ಧರಿಸಿದ್ದು, ನಂತರ ಅದನ್ನು ಹೆಜಮಾಡಿ ಟೋಲ್ ಗೇಟ್‌ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿ ಈ ಎರಡೂ ಟೋಲ್‌ಗೇಟ್‌ಗಳು ಇನ್ನೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಸಮಿತಿ ತಿಳಿಸಿದೆ.

ಈ ಸಂಬಂಧ ಸಚಿವ ನಿತಿನ್ ಗಡ್ಕರಿ ಅವರ ದೆಹಲಿ ನಿವಾಸಕ್ಕೆ ಸಂಸದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಕರ್ನಾಟಕ ಸಂಸದರು ಭೇಟಿ ನೀಡಿದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ನಿಯೋಗವು ರೂಪಿಸಿದ ಹಲವಾರು ಯೋಜನೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿದುಬಂದಿದೆ.

Edited By : Vijay Kumar
Kshetra Samachara

Kshetra Samachara

12/02/2021 06:12 pm

Cinque Terre

29.05 K

Cinque Terre

5

ಸಂಬಂಧಿತ ಸುದ್ದಿ