ಕುಂದಾಪುರ: ಸರ್ಕಾರದ ಅಧಿಕಾರಿಗಳು ತಮ್ಮ ತಮ್ಮ ಕೆಲಸದಲ್ಲಿ ತಲ್ಲೀನರಾಗಿರುವಂತಹ ಸಮಯದಲ್ಲೂ ತಮಗೆ ಸಿಕ್ಕಂತಹ ಸಮಯದಲ್ಲಿ ಸಿಬ್ಬಂದಿಗಳೊಂದಿಗೆ ಕೂಡಿಕೊಂಡು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕುಂದಾಪುರ ತಾಲೂಕು ಗುಜ್ಜಾಡಿ -ಮುಳ್ಳಿಕಟ್ಟೆ ಮುಖ್ಯ ರಸ್ತೆಯ ಕೆ.ಸಿ.ಡಿ.ಸಿ ಸರ್ಕಾರದ ಸ್ಥಳವು ಮಾಲೀನ್ಯದಿಂದ ಕೂಡಿದ್ದು ಇದನ್ನು ಮನಗಂಡ ಕುಂದಾಪುರ ವಲಯ ಅರಣ್ಯ ಅಧಿಕಾರಿಯವರು ಈ ಒಂದು ಸ್ವಚ್ಛತಾ ಕಾರ್ಯಕ್ರಮವನ್ನು 3 ಗಂಟೆಯಿಂದ 6 ಗಂಟೆಯ ತನಕ ಹಮ್ಮಿಕೊಂಡು ಒಂದು ಸಾವಿರ ಕೆ ಜಿ ಗೂ ಮೀರಿ ಕಸವನ್ನು ವಿಲೇವಾರಿ ಮಾಡುವುದರ ಮೂಲಕ ಸ್ವಚ್ಛತಾ ಮಾರ್ಗದರ್ಶಕರಾಗಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಂದಾಪುರ ವಲಯ ಅರಣ್ಯಾಧಿಕಾರಿಯವರಾದ ಪ್ರಭಾಕರ ಕುಲಾಲ್, ಕೆ.ಸಿ.ಡಿ.ಸಿ ನೆಡತೋಪ ಅಧಿಕಾರಿಯವರಾದ ಗಣಪತಿ ಭಟ್, ತೀರ್ಥಹಳ್ಳಿಯ ಕೆ.ಸಿ.ಡಿ.ಸಿ ನೆಡತೋಪ ಅಧಿಕಾರಿಯವರಾದ ಸಂಜೇಶ್ ಎಸ್ ಜೆ, ಕೆ.ಸಿ.ಡಿ.ಸಿ ಉಪವಲಯಾರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಹೊಸಾಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪಾರ್ವತಿ , ಕಾರ್ಯದರ್ಶಿ ಪ್ರಸಾದ್, ಹಾಗೂ ಗುಜ್ಜಾಡಿ ಗ್ರಾಮಸ್ಥರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.
Kshetra Samachara
11/02/2021 10:41 am