ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಕಟ್ಟಡ!; ತೆರವಿಗೆ ಕಾರ್ಪೊರೇಟರ್ ಅಡ್ಡಿ

ಮಂಗಳೂರು: ನಗರದ ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮ ಮನೆ ನಿರ್ಮಾಣ ವಿಚಾರದಲ್ಲಿ ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿರುವವರ ಮೇಲೆ ಕ್ರಮಕ್ಕೆ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಸೂಚನೆ ನೀಡಿದ್ದಾರೆ.

ಪೌರ ಕಾರ್ಮಿಕರಿಗೆ ಮೀಸಲಿಟ್ಟ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಕಟ್ಟಡಗಳನ್ನು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆಗೆ ಮನಪಾ ಅಧಿಕಾರಿಗಳು ಮುಂದಾಗಿದ್ದರು. ಈ ವೇಳೆ ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯ್ಕ್ ಕಟ್ಟಡ ತೆರವಿಗೆ ಅಡ್ಡಿ ಪಡಿಸಿದ್ದಾರೆ. ಇಲ್ಲಿ

25ಕ್ಕೂ ಅಧಿಕ ಮನೆಗಳು ಅಕ್ರಮವಾಗಿ ನಿರ್ಮಾಣವಾಗಿದೆ. ತೆರವುಗೊಳಿಸುವುದಾದರೆ ಎಲ್ಲವನ್ನೂ ತೆರವುಗೊಳಿಸಿ, ಒಂದು ಮನೆಯನ್ನು ಯಾಕೆ ತೆರವುಗೊಳಿಸುವುದೆಂದು ಅಡ್ಡಿ ಪಡಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಪೌರ ಕಾರ್ಮಿಕರು, ದಲಿತ ಮುಖಂಡರು ಹಾಗೂ ಕಾರ್ಪೊರೇಟರ್ ನಡುವೆ ವಾಗ್ವಾದ ನಡೆಯಿತು.

ಇದೀಗ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಅವರು ಅಕ್ರಮ ನಿರ್ಮಾಣದ ಕಟ್ಟಡ ತೆರವಿಗೆ ಅಡ್ಡಿಪಡಿಸಿದವರ ಪಟ್ಟಿ ಮಾಡುವಂತೆ ಸೂಚನೆ ನೀಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

Edited By :
Kshetra Samachara

Kshetra Samachara

12/06/2022 01:13 pm

Cinque Terre

6.67 K

Cinque Terre

0

ಸಂಬಂಧಿತ ಸುದ್ದಿ