ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕಾಮಗಾರಿಗೂ ಮುನ್ನವೇ ಕುಸಿಯಿತು ವಾರಾಹಿ ಕಾಲುವೆ

ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಬಹುಕೋಟಿ ವೆಚ್ಚದ ವಾರಾಹಿ ಕಾಲುವೆ ಕಾಮಗಾರಿ ಕೆಲವೆಡೆ ಕುಸಿದಿದೆ‌. ಈ ಹಿಂದೆ ಈ ಕಾಮಗಾರಿ ಪ್ರಾರಂಭಿಸುವಾಗ ಸ್ಥಳೀಯ ಆಡಳಿತದ ಮುನ್ನೆಚ್ಚರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಕಾಮಗಾರಿ ನಡೆಸಲಾಗಿತ್ತು ಎಂಬ ಆರೋಪ ಕೇಳಿಬರತೊಡಗಿದೆ.

ಇದೀಗ ಕಾಳಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಾವರದಿಂದ ವಕ್ವಾಡಿ, ಕುಂಭಾಸಿ, ಮಲ್ಯಾಡಿ ಮೂಲಕ ವಕ್ವಾಡಿ ನವನಗರ ಪರಿಸರದಲ್ಲಿ ಹಾದುಹೋಗುವ ವಾರಾಹಿ ಎಡದಂಡೆ ಮುಖ್ಯ ಕಾಲುವೆ ಕಾಮಗಾರಿ ಮುಗಿಯುವ ಮೊದಲೇ ಕುಸಿದಿದೆ.

ಈ ಕಾಲುವೆ ಕಾಮಗಾರಿಯ ಸಂದರ್ಭ ಈ ಮೊದಲು ಇದ್ದ ನೀರು ಹರಿಯುವ ಸಣ್ಣಪುಟ್ಟ ತೋಡುಗಳನ್ನು ಮುಚ್ಚಿದ್ದರಿಂದ ಮಳೆಯ ನೀರು ಕೃಷಿ ಭೂಮಿಗೂ ನುಗ್ಗಿದೆ.

Edited By :
Kshetra Samachara

Kshetra Samachara

07/07/2022 04:47 pm

Cinque Terre

10.49 K

Cinque Terre

3

ಸಂಬಂಧಿತ ಸುದ್ದಿ